ಫ್ರಾನ್ಸ್ ‘ಬುರ್ಕಿನಿ’ ನಿಷೇಧ ಅಮಾನತಿನಲ್ಲಿಟ್ಟ ಕೋರ್ಟ್
ಪ್ಯಾರಿಸ್, ಆ. 26: ಪೂರ್ಣ ದೇಹವನ್ನು ಮುಚ್ಚುವ ‘ಬುರ್ಕಿನಿ’ ಈಜುಡುಗೆಗೆ ್ರಾನ್ಸ್ ಸರಕಾರ ವಿಸಿರುವ ನಿಷೇಧವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಅಮಾನತಿನಲ್ಲಿರಿಸಿದೆ. ಈ ವಿಷಯಕ್ಕೆ ಸಂಬಂಸಿ ಪೂರ್ಣ ಪ್ರಮಾಣದ ಅಂತಿಮ ತೀರ್ಪನ್ನು ನೀಡುವ ಮುನ್ನ ನ್ಯಾಯಾಲಯ ಈ ಮಧ್ಯಾಂತರ ತೀರ್ಪು ನೀಡಿದೆ.
ಬುರ್ಕಿನಿ ನಿಷೇಧವು ನಾಗರಿಕ ಹಕ್ಕುಗಳನ್ನು ಪ್ರತಿಬಂಸುತ್ತದೆ ಎಂಬ ನೆಲೆಯಲ್ಲಿ ಮೆಡಿಟರೇನಿಯನ್ ಪಟ್ಟಣ ವಿಲನೊ-ಲೂಬೆಯಲ್ಲಿ ಜಾರಿಯಲ್ಲಿರುವ ಬುರ್ಕಿನಿ ನಿಷೇಧವನ್ನು ತೆರವುಗೊಳಿಸಬೇಕು ಎಂದು ಕೋರಿ ಲೀಗ್ ಆ್ ಹ್ಯೂಮನ್ ರೈಟ್ಸ್ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ‘ಕಾನ್ಸಿಲ್ ಡಿ ಎಟಾಟ್’ ನ್ಯಾಯಾಲಯ ಈ ತೀರ್ಪು ನೀಡಿದೆ.
ವಿಲನೊ-ಲೂಬೆ ಪಟ್ಟಣದಲ್ಲಿ ಬುರ್ಕಿನಿ ಮೇಲೆ ವಿಸಿದ ನಿಷೇಧವು ‘‘ಸ್ಪಷ್ಟವಾಗಿ ಹಾಗೂ ಕಾನೂನುಬಾಹಿರವಾಗಿ ಬರುವ ಮತ್ತು ಹೋಗುವ ಮೂಲಭೂತ ಸ್ವಾತಂತ್ರಗಳನ್ನು, ನಂಬಿಕೆಗಳ ಸ್ವಾತಂತ್ರವನ್ನು ಮತ್ತು ವ್ಯಕ್ತಿ ಸ್ವಾತಂತ್ರವನ್ನು ಉಲ್ಲಂಸುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.