ಹೆಂಡತಿಯ ಶವವನ್ನು ಹೆಗಲಲ್ಲಿ ಹೊತ್ತ ಮಾಂಝಿಗೆ ಬಹ್ರೇನ್ ಪ್ರಧಾನಿ ನೆರವು

Update: 2016-08-28 15:23 GMT

ಮನಾಮ, ಆ. 28: ಆ್ಯಂಬುಲೆನ್ಸ್‌ಗೆ ನೀಡಲು ಹಣವಿಲ್ಲದೆ, ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಹೆಂಡತಿಯ ಶವವನ್ನು ಹೆಗಲಲ್ಲಿ ಹೊತ್ತುಕೊಂಡು ಮಗಳೊಂದಿಗೆ 10 ಕಿ.ಮೀ. ನಡೆದುಕೊಂಡು ಹೋದ ಗ್ರಾಮೀಣ ಒಡಿಶಾದ ನಿವಾಸಿ ದಾನ ಮಾಂಝಿಯ ಕತೆ ಇಡೀ ಜಗತ್ತಿನ ಅಂತಃಕರಣವನ್ನೇ ಕದಡಿದಂತಿದೆ.
ಈ ಸುದ್ದಿ ಕೇಳಿ ಮನ ಮಿಡಿದಿರುವ ಬಹ್ರೇನ್‌ನ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ಮಾಂಝಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಕೇಳಿ ಪ್ರಧಾನಿ ಎಷ್ಟು ದುಃಖಿತರಾದರೆಂದರೆ, ಈ ವ್ಯಕ್ತಿಗೆ ತಾನು ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ ಎಂದು ಬಹ್ರೇನ್‌ನ ದೈನಿಕ ‘ಗಲ್ಫ್ ಡೇಲಿ ನ್ಯೂಸ್’ನಲ್ಲಿ ಪ್ರಕಟಗೊಂಡ ವರದಿಯೊಂದು ತಿಳಿಸಿದೆ.
ಅವರ ಕಚೇರಿಯು ಬಹ್ರೇನ್‌ನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ಮಾಂಝಿಗೆ ನೀಡಲು ಹಣ ನೀಡಿದ್ದಾರೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News