ಜರ್ಮನ್ ಸಂಸದ ವರ್ನರ್ ಕ್ಲಾವ್ನ್ : ಆಗ ಇಸ್ಲಾಮ್ ದ್ವೇಷಿ, ಈಗ ಶ್ರದ್ಧಾವಂತ ಮುಸ್ಲಿಂ

Update: 2016-08-30 11:06 GMT

ಜರ್ಮನಿನ ಕಟುಬಲಪಂಥೀಯ ನ್ಯಾಷನಲ್ ಡೆಮಾಕ್ರೆಟಿಕ್ ಪಾರ್ಟಿ (ಎನ್‌ಡಿಪಿ) ಸಂಸದ ವಾರ್ನರ್ ಕ್ಲಾವ್ನ್ ತಮ್ಮ 75ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರ ಹೊಂದಿದ್ದಾರೆ. ವರ್ನರ್ ಹಿಂದೆ ವಲಸಿಗರು ಮತ್ತು ನಿರಾಶ್ರಿತರನ್ನು ತೀವ್ರವಾಗಿ ವಿರೋಧಿಸುವಲ್ಲಿ ಕುಖ್ಯಾತಿ ಹೊಂದಿದ್ದರು. ಆದರೆ ಈಗ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ನಿರಾಶ್ರಿತರ ಅತೀ ದೊಡ್ಡ ಬೆಂಬಲಿಗರಾಗಿದ್ದಾರೆ.

ತಮ್ಮ ಹೆಸರನ್ನು ಇಬ್ರಾಹಿಂ ಎಂದು ಬದಲಿಸಿಕೊಂಡಿರುವ ವರ್ನರ್ ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ, ಈಸ್ಟರ್ನ್ ಡಿವಾನ್ ಮತ್ತು ಶ್ರೇಷ್ಠ ಜರ್ಮನ್ ಕವಿ ಜೊಹಾನ್ ವೋಲ್ಫ್‌ಗಾಂಗ್ ವಾನ್ ಗೋಯ್ಥೆ ಕವಿತೆಗಳು ಪ್ರವಾದಿ ಮುಹಮ್ಮದ್‌ರನ್ನು ಪ್ರಶಂಸಿಸಿದ ಬಳಿಕ ಅವರು ಇಸ್ಲಾಂ ಬಗ್ಗೆ ಹೆಚ್ಚು ತಿಳಿಯಲು ಬಯಸಿದ್ದರು. ಹೀಗಾಗಿ ಅವರು ಜರ್ಮನ್‌ಗೆ ಅನುವಾದಗೊಂಡಿರುವ ಕುರಾನ್ ಓದಿದರು. ನಂತರ ಇಸ್ಲಾಂ ಅನ್ನು ಅಪ್ಪಿಕೊಂಡರು.

ಇಸ್ಲಾಂಗೆ ಮತಾಂತರಗೊಂಡ ಮೇಲೆ ಚಿಂತನೆಗಳೆಲ್ಲ ಬದಲಾಗಿದೆ ಎಂದು ವರ್ನರ್ ಹೇಳುತ್ತಾರೆ. "ಇಸ್ಲಾಂ ವಿರೋಧಿ ಮತ್ತು ಮುಸ್ಲಿಂ ವಿರೋಧಿಯಾಗಿದ್ದ ಕಟು ಬಲಪಂಥೀಯ ಪಕ್ಷದ ಸದಸ್ಯನಾಗಿರುವ ನನ್ನ ಇತಿಹಾಸದ ಕೊಂಡಿಗಳನ್ನು ಕಳಚಿಕೊಳ್ಳುವುದಕ್ಕೆ ಅಷ್ಟು ಮಾತ್ರ ಸಾಕಾಗದು. ನನ್ನ ಇತಿಹಾಸದ ಮರುಪೂರಣಕ್ಕಾಗಿ ಇನ್ನೂ ಶ್ರೇಷ್ಠ ಕೆಲಸಗಳನ್ನು ಮಾಡಲು ಬಯಸಿದ್ದೇನೆ. ನಿರಾಶ್ರಿತರಿಗೆ ನೆರವಾಗಲು ಆರಂಭಿಸಿದ್ದೇನೆ" ಎನ್ನುತ್ತಾರೆ ವಾರ್ನರ್.

ವಾರ್ನರ್ ಕ್ಲಾವ್ನ್ ಮಕ್ಕಾಗೆ ಯಾತ್ರೆಯನ್ನೂ ಮಾಡಿದ್ದಾರೆ. ಅವರು ಈಗ ಕಟು ಬಲಪಂಥೀಯವಾದದ ಗೊಂದಲದಿಂದ ದೂರವಾಗಿ ಶಾಂತಿಯುತ ಜೀವನ ನಡೆಸುತ್ತಿದ್ದಾರೆ.

ಕೃಪೆ: todaysbreaking.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News