×
Ad

ಗುಜರಾತ್ ಭೇಟಿ ವೇಳೆ ಹಲವು ಪತ್ರಕರ್ತರ ಪ್ರಾಣ ಉಳಿಸಿದರು ಪ್ರಧಾನಿ ಮೋದಿ !

Update: 2016-08-30 20:13 IST

ಸೌರಾಷ್ಟ್ರ, ಆ. 30 : ಗುಜರಾತ್ ನ ಸೌರಾಷ್ಟ್ರದಲ್ಲಿ ಮಂಗಳವಾರ ಅಣೆಕಟ್ಟೊಂದನ್ನು ಉದ್ಘಾಟಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಪ್ರಜ್ಞೆಯಿಂದಾಗಿ ಹಲವು ಪತ್ರಕರ್ತರು ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದು ತಪ್ಪಿದೆ ಎಂದು ಹೇಳಲಾಗಿದೆ. ಈ ಬಗ್ಗೆ 'ಜನಸತ್ತಾ' ವರದಿ ಮಾಡಿದೆ. 

ಈ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ " ಅಣೆಕಟ್ಟಿನಿಂದ ನೀರು ಬಿಟ್ಟ ಮೇಲೆ ಪ್ರಧಾನಿ ನಿಂತು ನೋಡುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಛಾಯಾಚಿತ್ರಗ್ರಾಹಕರು  ನೀರು ಬಿಡುವ ಜಾಗದಲ್ಲೇ ನಿಂತುಕೊಂಡಿದ್ದರು. ಅಣೆಕಟ್ಟಿನಿಂದ ಬಿಟ್ಟಿದ್ದ ನೀರು ಅವರ ಕಡೆಗೆ ರಭಸವಾಗಿ ಬರುತ್ತಿತ್ತು. ಫೋಟೋ ತೆಗೆಯುವಲ್ಲಿ ವ್ಯಸ್ಥ ಛಾಯಾಚಿತ್ರಗ್ರಾಹಕರಿಗೆ  ಈ ಅಪಾಯದ ಅರಿವು ಆಗಲೇ ಇಲ್ಲ. ತಕ್ಷಣ ಪ್ರಧಾನಿಯವರು ಚಪ್ಪಾಳೆ ತಟ್ಟಿ ಕೈ ಸನ್ನೆ ಮೂಲಕ ಅವರನ್ನು ಆ ಜಾಗದಿಂದ ದೂರ ಸರಿಯುವಂತೆ ಹೇಳಿದರು. ಇಲ್ಲದಿದ್ದರೆ ಒಂದು ದೊಡ್ಡ ದುರಂತ ಅಲ್ಲಿ ಸಂಭವಿಸುತ್ತಿತ್ತು."


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News