×
Ad

ಇದು ನಗುವ ವಿಷಯವಲ್ಲ ! : ಕಪಿಲ್ ಶರ್ಮ ಹಾಗು ಅವರ ತಂಡದ ಸಂಪಾದನೆ ಎಷ್ಟು ಗೊತ್ತೇ ?

Update: 2016-08-31 14:19 IST

ಮುಂಬೈ, ಆ. 31 : ಖ್ಯಾತ ಹಾಸ್ಯ ಕಲಾವಿದ ಕಪಿಲ್ ಶರ್ಮ ಕಲರ್ಸ್ ನಲ್ಲಿ 'ಕಾಮಿಡಿ ನೈಟ್ಸ್ ವಿಥ್ ಕಪಿಲ್'ಷೋ ನಿಲ್ಲಿಸಿದಾಗ ತಡ ಮಾಡದೆ ಕಪಿಲ್ ರನ್ನು ಬಾಚಿಕೊಂಡ ಸೋನಿ ಚಾನಲ್ ಅವರಿಗೆ ಪ್ರೈಮ್ ಟೈಮ್ ನೀಡಿತು. ಹಾಗೆ ಕಪಿಲ್ ಹಾಗು ಅವರ ತಂಡ 'ದಿ ಕಪಿಲ್ ಶರ್ಮ ಷೋ' ದೊಂದಿಗೆ ಭರ್ಜರಿ ಮರು ಎಂಟ್ರಿ ಮಾಡಿತು.   ಈಗ ಬಂದಿರುವ ವರದಿಗಳ ಪ್ರಕಾರ ಕಪಿಲ್ ರನ್ನು ಕಳಕೊಂಡ ಕಲರ್ಸ್ ಪಶ್ಚಾತ್ತಾಪ ಪಡುತ್ತಿದ್ದರೆ , ಸೋನಿಯ ಟಿ ಆರ್ ಪಿ ರಾಕೆಟ್ ವೇಗದಲ್ಲಿ ಹಾರುತ್ತಿದೆ. ಅದೇ ರೀತಿ ಜಾಹೀರಾತು ಆದಾಯ ಹರಿದು ಬರುತ್ತಿದೆ.  

ವಿಷಯ ಅದಲ್ಲ. ಈ ಹೊಸ ಷೋ ಭಾರೀ ಯಶಸ್ಸು ಕಾಣುತ್ತಿರುವಂತೆಯೇ  ಕಪಿಲ್ ಹಾಗು ಅವರ ತಂಡದ ಸಂಭಾವನೆ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದೆ. ಅಧಿಕೃತ ಮೂಲಗಳ ಪ್ರಕಾರ ಕಪಿಲ್ ಒಂದು ಎಪಿಸೋಡ್ ಗೆ 60 ರಿಂದ 80 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ  ! ಹೌದು, ಅಂದರೆ ತಿಂಗಳಿಗೆ ಎಂಟು ಎಪಿಸೋಡ್ ಗಳಿಂದ ಅವರು ಪಡೆಯುತ್ತಿರುವ ಸಂಭಾವನೆ ಹೆಚ್ಚು ಕಡಿಮೆ 5 ಕೋಟಿ ರೂಪಾಯಿ ! ಇದು ಬಾಲಿವುಡ್ ನಲ್ಲಿ ಈಗ ಹೆಸರು ಮಾಡುತ್ತಿರುವ ಆಲಿಯಾ ಭಟ್, ಟೈಗರ್ ಶ್ರಾಫ್ ಅವರ ಸಂಭಾವನೆಗಿಂತ ಹೆಚ್ಚು !

ಇನ್ನು ಕಪಿಲ್ ರ ತಂಡವೂ ಕಡಿಮೆಯೇನಿಲ್ಲ. ಮಾಜಿ ' ಗುತ್ತಿ' ಹಾಲಿ ಡಾಕ್ಟರ್ ಮಶೂರ್ ಗುಲಾಟಿ ಪಾತ್ರಧಾರಿ ಸುನಿಲ್ ಗ್ರೋವರ್ ಒಂದು ಎಪಿಸೋಡ್ ಗೆ 10-12 ಲಕ್ಷ ಜೇಬಿಗಿಳಿಸುತ್ತಿದ್ದಾರೆ.

ಕಿಕು ಶಾರದಾ 5-7 ಲಕ್ಷ ಎಪಿಸೋಡ್ ಗೆ ಪಡೆದರೆ ,

ಇನ್ನೊಬ್ಬ ಪ್ರಮುಖ ಕಲಾವಿದ ಅಲಿ ಅಸ್ಗರ್ ಕೂಡ 5-7 ಲಕ್ಷ ಪಡೆಯುತ್ತಿದ್ದಾರೆ.

ಇನ್ನು ಚಂದು ಪಾತ್ರದಾರಿ ಚಂದನ್ ಪ್ರಭಾಕರ್ 4 ಲಕ್ಷ, ಸುಮೋನಾ ಚಕ್ರವರ್ತಿ 6-7 ಲಕ್ಷ ಹಾಗು ರಾಷೆಲ್ ರಾವ್ 3-4 ಲಕ್ಷ ಪ್ರತಿ ಎಪಿಸೋಡ್ ಗೆ ಪಡೆಯುತ್ತಿದ್ದಾರೆ.

ಇನ್ನು ಕೇವಲ ನಗುವಿನ ಮೂಲಕವೇ ಗಮನ ಸೆಳೆಯುವ ನವಜೋತ್ ಸಿಂಗ್ ಸಿದ್ದು ಎಪಿಸೋಡ್ ಗೆ 8-10  ಲಕ್ಷ ಸಂಪಾದಿಸುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News