ಗೋವಾ ಆರೆಸ್ಸೆಸ್ ವರಿಷ್ಠನ ಉಚ್ಚಾಟನೆ

Update: 2016-08-31 17:28 GMT

ಪಣಜಿ, ಆ.31: ಶಿಕ್ಷಣ ಮಾಧ್ಯಮದ ಕುರಿತಾಗಿ ಗೋವಾದ ಆಳುವ ಬಿಜೆಪಿಯ ವಿರುದ್ಧ ಕಠಿಣ ನಿಲುವು ತಳೆದಿದ್ದ ಹಾಗೂ ಇತ್ತೀಚೆಗೆ ಪಕ್ಷಾಧ್ಯಕ್ಷ ಅಮಿತ್ ಶಾಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಗೋವಾ ಆರೆಸ್ಸೆಸ್‌ನ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್‌ರನ್ನು ಸಂಘವು ಹುದ್ದೆಯಿಂದ ಉಚ್ಚಾಟಿಸಿದೆ.

ಆಂಗ್ಲ ಮಾಧ್ಯಮ ಶಾಲೆಗಳನ್ನು ಬೆಂಬಲಿಸುವ ರಾಜ್ಯ ಸರಕಾರದ ನೀತಿಯನ್ನು ವಿರೋಧಿಸಿ, ಕೊಂಕಣಿ ಹಾಗೂ ಮರಾಠಿಗಳಂತಹ ಪ್ರಾದೇಶಿಕ ಭಾಷೆಗಳಿಗಾಗಿ ಹೋರಾಡಲು ಗೋವಾದ ವಿಧಾನಸಭೆ ಚುನಾವಣೆಗೆ ಮುನ್ನ ಹೊಸ ರಾಜಕೀಯ ಪಕ್ಷವೊಂದರ ಸ್ಥಾಪನೆಯ ಯೋಜನೆಯನ್ನು ವೆಲಿಂಗ್ಕರ್ ಘೋಷಿಸಿದರು. ಗೋವಾ ವಿಭಾಗದ ಸಂಘ ಚಾಲಕನ ಹುದ್ದೆಯಿಂದ ತನ್ನನ್ನು ಉಚ್ಚಾಟಿಸಿರುವ ಕುರಿತು ನಾಗಪುರದ ಆರೆಸ್ಸೆಸ್ ಮುಖ್ಯಾಲಯದಿಂದ ಬಂದಿರುವ ಪತ್ರ ಅವರಿಗೆ ಮಂಗಳವಾರ ತಲುಪಿದೆ.

ವೆಲಿಂಗ್ಕರ್‌ರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಗಿದೆ. ಅವರು ರಾಜಕೀಯ ಚಟುವಟಿಕೆಗೆ ಸೇರಲು ಬಯಸಿ ದ್ದಾರೆ. ಸಂಘದ ನಾಯಕನಾಗಿ ಅವರು ಅದನ್ನು ಮಾಡುವಂತಿಲ್ಲ. ಅವರ ಉತ್ತರಾಧಿಕಾರಿಯ ಕುರಿತು ನಿರ್ಧಾರವನ್ನು ಶೀಘ್ರವೇ ಕೈಗೊಳ್ಳಲಾಗುವುದೆಂದು ಆರೆಸ್ಸೆಸ್‌ನ ಅಖಿಲಭಾರತ ಪ್ರಚಾರ ಪ್ರಮುಖ್ ಮನಮೋಹನ ವೈದ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News