ವಾದ್ರಾ ಭೂ ಹಗರಣ ಆರೋಪ: ಧಿಂಗ್ರಾ ಆಯೋಗದ ವರದಿ ಸಲ್ಲಿಕೆ

Update: 2016-08-31 17:29 GMT

ಚಂಡಿಗಡ,ಆ.31: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾರ ವ್ಯವಹಾರ ಸೇರಿದಂತೆ ಗುರ್ಗಾಂವ್‌ನಲ್ಲಿಯ ವಿವಾದಾತ್ಮಕ ಭೂ ವ್ಯವಹಾರಗಳ ತನಿಖೆಗಾಗಿ ಹರ್ಯಾಣ ಸರಕಾರವು ನೇಮಿಸಿದ್ದ ನ್ಯಾ.ಎಸ್.ಎನ್ ಧಿಂಗ್ರಾ ಅವರ ಏಕಸದಸ್ಯ ವಿಚಾರಣಾ ಆಯೋಗವು ಬುಧವಾರ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.

ಗುರ್ಗಾಂವ್‌ನ ಸೆಕ್ಟರ್ 83 ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ವಾಣಿಜ್ಯಿಕ ಆಸ್ತಿಗಳನ್ನು ಅಭಿವೃದ್ಧಿಗೊಳಿಸಲು ವಾದ್ರಾರ ಕಂಪೆನಿ ಮತ್ತು ಇತರ ಸಂಸ್ಥೆಗಳಿಗೆ ಪರವಾನಿಗೆಗಳ ಮಂಜೂರಾತಿಯ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಆಯೋಗಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News