24 ವರ್ಷಗಳ ಬಳಿಕ ನ್ಯಾಯ: ಮಅದನಿ ಸಹಿತ 8 ಆರೋಪಿಗಳ ಖುಲಾಸೆ

Update: 2016-09-01 12:11 GMT

ಕೊಚ್ಚಿ,ಸೆ.1: ಇಪ್ಪತ್ತನಾಲ್ಕು ವರ್ಷಗಳ ಕಾಯುವಿಕೆಯ ನಂತರ, ಐಎಸ್‌ಎಸ್ ರಹಸ್ಯ ಸಭೆ ಸೇರಿತ್ತೆಂಬ ಪ್ರಕರಣದಲ್ಲಿ ಅಬ್ದುನ್ನಾಸರ್ ಮಆದನಿ ಸಹಿತ ಎಂಟು ಮಂದಿಯ ವಿಚಾರಣೆ ಪೂರ್ಣಗೊಂಡಿದ್ದು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಎಲ್ಲರನ್ನೂ ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.

1992ರಲ್ಲಿ ಬಾಬರಿ ಮಸೀದಿ ಪ್ರಕರಣದ ಬಳಿಕ ಕೊಲ್ಲಂ ಮೈನಾಗಪಳ್ಳಿಯಲ್ಲಿ ಮಅದನಿಯ ಮನೆಯಲ್ಲಿ ನಿಷೇಧಿತ ಸಂಘಟನೆಯಾದ ಐಎಸ್‌ಎಸ್ ಗುಪ್ತಸಭೆ ಸೇರಿತ್ತು ಎಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಅಬ್ದುನ್ನಾಸರ್ ಮಅದನಿ ಸಹಿತ ಎಲ್ಲ ಆರೋಪಿಗಳನ್ನು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿ ಪಟ್ಟಿಯ ಎಂಟು ಮಂದಿ ವಿಚಾರಣೆಗೆ ಒಳಗಾಗಿದ್ದರು, ಉಳಿದವರು ಭೂಗತರಾಗಿದ್ದರು ಎಂದು ವರದಿ ತಿಳಿಸಿದೆ. ಪ್ರಥಮ ಆರೋಪಿ ಮಅದನಿ ಮತ್ತು ಅವರ ತಂದೆಯನ್ನು ಪ್ರಕರಣದವಿಚಾರಣೆ ವೇಳೆ ಕೋರ್ಟಿಗೆ ನೇರವಾಗಿ ಹಾಜರಾಗಬೇಕಿಲ್ಲ ಎಂದು ನ್ಯಾಯಾಲಯ ಹೆಳೀತ್ತು. ಶಾಸ್ತಂಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದು, 24 ವರ್ಷಗಳ ಬಳಿಕ ತೀರ್ಪು ಬಂದಂತಾಗಿದೆ. ನ್ಯಾಯಾಧೀಶ ಕೆ.ಎಂ ಬಾಲಚಂದ್ರನ್ ಮಅದನಿ ಸಂಗಡಿಗರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

ಕೊಲ್ಲಂನ ನ್ಯಾಯಾಲಯದಲ್ಲಿ ಪೊಲೀಸರು ಆರೋಪ ಪತ್ರ ಸಲ್ಲಿಸಿದ್ದರೂ ಮಅದನಿಯ ಮನವಿಯಂತೆ ವಿಚಾರಣೆಯನ್ನು ಎರ್ನಾಕುಲಂ ಸೆಷನ್ಸ್ ಕೋರ್ಟ್‌ಗೆ ನಂತರ ವರ್ಗಾಯಿಸಲಾಗಿತ್ತು. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಜೈಲಿನಲ್ಲಿರುವ ಮಅದನಿಗೆ ಹಾಗೂ ಅವರ ತಂದೆಗೆ ನೇರವಾಗಿ ಹಾಜರಾಗವುದರಿಂದ ಎಂದು ನ್ಯಾಯಾಲಯ ವಿನಾಯಿತಿ ನೀಡಿತ್ತು. ಪ್ರಾಸಿಕ್ಯೂಶನ್‌ಗಾಗಿ ಅಡಿಶನಲ್ ಪಬ್ಲಿಕ್‌ಪ್ರಾಸಿಕ್ಯೂಟರ್ ರಾಜು ವಕ್ಕಕರ ವಾದಿಸಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News