ಐಐಟಿ-ಬಾಂಬೆ ವಿದ್ಯಾರ್ಥಿಗಳು ಎಷ್ಟು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆ ಗೊತ್ತೇ?

Update: 2016-09-01 18:24 GMT

ಮುಂಬೈ, ಸೆ.1: ಪ್ರತಿಷ್ಠಿತ ಐಐಟಿ-ಬಾಂಬೆ ಇದರ ವಿದ್ಯಾರ್ಥಿಗಳು ಎಷ್ಟು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆಂದು ಸಮೀಕ್ಷೆಯೊಂದರ ಮುಖಾಂತರ ತಿಳಿದು ಬಂದಿದ್ದು ಅದರ ವಿವರಗಳು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹು ದ್ದಾಗಿದೆ. ಈ ಸಮೀಕ್ಷೆಯಲ್ಲಿ ಕಂಡು ಕೊಂಡಂತೆ ಪ್ರತಿ 10 ಮಂದಿ ವಿದ್ಯಾರ್ಥಿ ಗಳಲ್ಲಿ ಆರು ಮಂದಿ ಎರಡು ಮೂರು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆ. ಅದಕ್ಕೆ ಅವರು ನೀಡುವ ಕಾರಣ ಸ್ನಾನ ಮಾಡುವ ಕೆಲಸ ‘ತುಂಬಾ ಶ್ರಮದಾಯಕ’. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 10 ವಿದ್ಯಾರ್ಥಿಗಳು ತಾವು ವಾರಕ್ಕೊಮ್ಮೆ ಸ್ನಾನ ಮಾಡುವುದಾಗಿ ಹೇಳಿದರೆ, ಸುಮಾರು ಶೇ.30ರಷ್ಟು ಮಂದಿ ಪ್ರತಿ ದಿನ ಸ್ನಾನ ಮಾಡುತ್ತೇವೆಂದು ಹೇಳಿದ್ದಾರೆ.

 ಶೇ.40ರಷ್ಟು ಹಾಸ್ಟೆಲ್ ವಿದ್ಯಾರ್ಥಿಗಳು ತಾವು ಪದವಿ ಪಡೆದ ನಂತರ ತಮ್ಮ ಸ್ನೇಹಿತರೊಂದಿಗೆ ಇರಲು ಬಯಸಿದರೆ, ಶೇ. 27ರಷ್ಟು ಮಂದಿ ಮನೆಗೆ ಹಿಂದಿರುಗಿ ಒಬ್ಬರೇ ಇರಲು ಬಯಸುತ್ತಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 66ರಷ್ಟು ಮಂದಿ ತಮ್ಮ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರೆ, ಶೇ. 29.8 ಮಂದಿ ತಮ್ಮ ಹೆತ್ತವರೊಂದಿಗೆ ಕಡಿಮೆ ಸಂವಹನ ನಡೆಸುವವರಾಗಿದ್ದಾರೆ.
  ಈ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಶೇ. 52.4ರಷ್ಟು ವಿದ್ಯಾರ್ಥಿಗಳು ಗೋವಾಗೆ ಸ್ನೇಹಿತರೊಂದಿಗೆ ಸೇರಿ ಸಂತೋಷ ಅನುಭವಿಸಿದ್ದಾರೆ. ಶೇ. 70ರಷ್ಟು ವಿದ್ಯಾರ್ಥಿಗಳು ಟಿಕೆಟ್ ರಹಿತ ಪ್ರಯಾಣವನ್ನು ಲೋಕಲ್ ರೈಲುಗಳಲ್ಲಿ ಮಾಡಿದ್ದರೆ, ಶೇ. 55.7ರಷ್ಟು ಮಂದಿ ಜೇಮ್ಸ್ ಬಾಂಡ್ ಸಿನೆಮಾ ‘ಕ್ಯಾಸಿನೊ ರಾಯೇಲ್’ನಿಂದ ಪ್ರಭಾವಿತರಾಗಿ ಪೋಕರ್ ಅಥವಾ ಬ್ಲಾಕ್ ಜ್ಯಾಕ್ ಆಡಿದ್ದಾರೆ.

 ವಿವಾಹದ ವಿಚಾರ ಬಂದಾಗ ಶೇ. 38.15 ಮಂದಿ ಮುಂದಿನ ಐದು ವರ್ಷಗಳ ತನಕ ವಿವಾಹವಾಗಿ ತಮ್ಮ ಗೋರಿಗಳನ್ನು ತಾವೇ ತೋಡ ಬಯಸುವುದಿಲ್ಲವೆಂದು ಹೇಳಿದ್ದಾರೆ. ಶೇ. 31 ಮಂದಿ ತಾವು ಯಾವಾಗ ವಿವಾಹವಾಗುತ್ತೇವೆಂದು ಗೊತ್ತಿಲ್ಲವೆಂದು ಹೇಳಿದರೆ ಶೇ. 21.4 ಮಂದಿ ಮುಂದಿನ ಮೂರರಿಂದ ಐದು ವರ್ಷಗಳೊಳಗಾಗಿ ವಿವಾಹವಾಗುವುದಾಗಿ ಹೇಳಿದ್ದಾರೆ.
 
ಶಿಕ್ಷಣ ಸಂಸ್ಥೆಯಲ್ಲಿ ಹಾಜರಿ ವಿಚಾರದಲ್ಲಿ ಸಮೀಕ್ಷೆ ನಡೆದಾಗ ಶೇ. 39.5 ಮಂದಿ ತಾವು ಎಲ್ಲ ತರಗತಿಗಳಿಗೆ ಹಾಜರಾಗಬಯಸುವುದಾಗಿ ಹೇಳಿದ್ದರೆ, ಶೇ. 32.5 ಮಂದಿ ತಾವು ಆದಷ್ಟು ಕಡಿಮೆ ತರಗತಿಗಳಿಗೆ ಹಾಜರಾಗಬಯಸುವುದಾಗಿ ಹೇಳಿದರು. ಶೇ. 16.2ರಷ್ಟು ವಿದ್ಯಾರ್ಥಿಗಳು ತಾವು ಸಂಸ್ಥೆಯ ಸೆಂಟ್ರಲ್ ಲೈಬ್ರೇರಿ ಪ್ರವೇಶಿಸಿಯೇ ಇಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News