ಯುಎಸ್ ಓಪನ್: ಸಾನಿಯಾಗೆ ಜಯ, ಪೇಸ್, ಬೋಪಣ್ಣಗೆ ಸೋಲು

Update: 2016-09-03 05:47 GMT

ನ್ಯೂಯಾರ್ಕ್, ಸೆ.2: ಯುಎಸ್ ಓಪನ್‌ನಲ್ಲಿ ಭಾರತದ ಟೆನಿಸ್ ಆಟಗಾರರು ಮಿಶ್ರ ಫಲ ಪಡೆದಿದ್ದಾರೆ. ಹಿರಿಯ ಸ್ಟಾರ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸೋತು ಹೊರ ನಡೆದಿದ್ದಾರೆ.

ಆದರೆ, ಸಾನಿಯಾ ಮಿರ್ಝಾ ಮಿಶ್ರ ಡಬಲ್ಸ್‌ನಲ್ಲಿ ಜಯ ಸಾಧಿಸಿ ಭಾರತದ ಆಶಾಕಿರಣವಾಗಿ ಗೋಚರಿಸಿದ್ದಾರೆ.

 ಇಂಡೋ-ಜರ್ಮನಿ ಜೋಡಿ ಪೇಸ್ ಹಾಗೂ ಆ್ಯಂಡ್ರೆ ಬೆಗೆಮನ್ 59 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಸ್ಟೀಫನ್ ರಾಬರ್ಟ್ ಹಾಗೂ ಇಸ್ರೇಲ್‌ನ ದುಡಿ ಸೆಲಾ ವಿರುದ್ಧ ಕಠಿಣ ಹೋರಾಟ ನೀಡಿದರೂ 6-2, 5-7, 4-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಭಾರತದ ರೋಹನ್ ಬೋಪಣ್ಣ ಹಾಗೂ ಡೆನ್ಮಾರ್ಕ್‌ನ ಫೆಡರೆಕ್ ನೆಲ್ಸನ್ ಅಮೆರಿಕದ ಬ್ರಿಯಾನ್ ಬಾಕೆರ್ ಹಾಗೂ ನ್ಯೂಝಿಲೆಂಡ್‌ನ ಮಾರ್ಕಸ್ ಡಾನಿಯೆಲ್ ವಿರುದ್ಧ 6-2, 7-6(5) ಸೆಟ್‌ಗಳ ಅಂತರದಿಂದ ಶರಣಾದರು.

ಮಿಶ್ರ ಡಬಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸಾನಿಯಾ ಹಾಗೂ ಕ್ರೊಯೇಷಿಯದ ಇವಾನ್ ಡೊಡಿಗ್ ಶ್ರೇಯಾಂಕರಹಿತ ಅಮೆರಿಕದ ಟೇಲರ್ ಟೌನ್‌ಸೆಂಡ್ ಹಾಗೂ ಡೊನಾಲ್ಡ್ ಯಂಗ್ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಸೋತಿದ್ದಾರೆ.

ಕೇವಲ 32 ನಿಮಿಷಗಳಲ್ಲಿ ಪ್ರಿ-ಕ್ವಾರ್ಟರ್ ತಲುಪಿದ ಜೊಕೊವಿಕ್

ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಕೇವಲ 32 ನಿಮಿಷಗಳಲ್ಲಿ ಯುಎಸ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಜೊಕೊವಿಕ್‌ರ ಎದುರಾಳಿ ರಶ್ಯದ ಮಿಖೈಲ್ ಯೂಝ್ನಿ ಸ್ನಾಯು ಸೆಳೆತದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಆಗ ಹಾಲಿ ಚಾಂಪಿಯನ್ ಜೊಕೊವಿಕ್ ಮೊದಲ ಸೆಟ್‌ನಲ್ಲಿ 4-2 ಅಂತರದಿಂದ ಮುನ್ನಡೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಸುತ್ತಿಗೆ ತಲುಪಿದರು.

2 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಯುಎಸ್ ಓಪನ್‌ನಲ್ಲಿ ಮೂರು ವರ್ಷಗಳ ಬಳಿಕ ಮೊದಲ ಬಾರಿ ನಾಲ್ಕನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ನಡಾಲ್ ರಶ್ಯದ ಆ್ಯಂಡ್ರೆ ಕುಝ್ನೆಸೋವಾ ವಿರುದ್ಧ 6-1, 6-4, 6-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News