×
Ad

Ind Vs SA T20 | ದಟ್ಟ ಮಂಜಿನಿಂದ ಲಕ್ನೋದಲ್ಲಿ ನಾಲ್ಕನೇ ಟಿ20 ರದ್ದು

Update: 2025-12-17 22:05 IST

Photo Credit : NDTV 

ಲಕ್ನೋ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ದಟ್ಟ ಮಂಜಿನ ಕಾರಣ ರದ್ದುಗೊಂಡಿದೆ. ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಗೋಚರತೆ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ ಎಂದು ಅಂಪೈರ್‌ಗಳು ಸ್ಪಷ್ಟಪಡಿಸಿದ್ದಾರೆ.

ನಿಗದಿತ ವೇಳಾಪಟ್ಟಿಯಂತೆ ಸಂಜೆ 6.30ಕ್ಕೆ ಟಾಸ್ ನಡೆಯಬೇಕಿತ್ತು ಹಾಗೂ ರಾತ್ರಿ 7ಕ್ಕೆ ಪಂದ್ಯ ಆರಂಭವಾಗಬೇಕಾಗಿತ್ತು. ಆದರೆ ಸಂಜೆ ವೇಳೆಗೆ ಮೈದಾನವನ್ನು ದಟ್ಟ ಮಂಜು ಆವರಿಸಿಕೊಂಡ ಪರಿಣಾಮ ಆಟದ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ರಾತ್ರಿ 9.30ರವರೆಗೆ ಹವಾಮಾನ ಸುಧಾರಣೆಗೆ ಕಾದ ಬಳಿಕವೂ ಗೋಚರತೆ ಹೆಚ್ಚಾಗದ ಕಾರಣ ಟಾಸ್ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.

ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ ಇದರಿಂದ ಯಾವುದೇ ಹಿನ್ನಡೆಯಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News