ಅನ್ಯ ಧರ್ಮಿಯರನ್ನು ವಿವಾಹವಾದರೆ ಸಮುದಾಯ ಸರ್ಟಿಫಿಕೇಟ್‌ಗಳ ಆಧಾರದಲ್ಲಿ ಮದುವೆ ರಿಜಿಸ್ಟರ್ ನಡೆಸುವಂತಿಲ್ಲ

Update: 2016-09-03 07:08 GMT

ಕೊಚ್ಚಿ,ಸೆಪ್ಟಂಬರ್ 3: ಬೇರೆಬೇರೆ ಧಾರ್ಮಿಕವಿಭಾಗದವರು ಪರಸ್ಪರ ವಿವಾಹವಾದರೆ ಸಮುದಾಯದ ಸಂಘಟನೆಗಳು ನೀಡುವ ಸರ್ಟಿಫಿಕೆಟ್‌ಗಳು ನೀಡುವ ಆಧಾರದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ನೋಂದಾಯಿಸಿಕೊಳ್ಳಬಾರದೆಂದು ಕೇರಳ ಹೈಕೋರ್ಟ್ ಹೇಳಿದೆ ಎಂದು ವರದಿಯಾಗಿದೆ. ವಿವಿಧ ಧರ್ಮಕ್ಕೆ ಸೇರಿದವರು ವಿವಾಹಿತರಾದರು ಎಂದು ಶಿವಗಿರಿ ಮಠ ಮತ್ತು ಎಸ್‌ಎನ್‌ಡಿಪಿ ಸಭೆಯಂತಹ ಸಾಮುದಾಯಿಕ ಸಂಘಟನೆಗಳು ಸರ್ಟಿಫಿಕೇಟ್ ನೀಡುವುದನ್ನು ಸರಕಾರ ನಿಯಂತ್ರಿಸಬೇಕು ಎಂದು ಡಿವಿಜನಲ್ ಬೆಂಚ್ ಆದೇಶ ನೀಡಿದೆ. ಅದೇ ವೇಳೆ ಒಂದೇ ಧರ್ಮಕ್ಕೆ ಸೇರಿದವರ ವಿವಾಹ ಕೂಡಾ ಅನುಮತಿಸಲ್ಪಟ್ಟ ಸ್ಥಳದಲ್ಲಿ ಧಾರ್ಮಿಕ ವಿಧಿ ಪ್ರಕಾರ ನಡೆದಿದೆಯೇ ಎಂದು ದೃಢಪಡಿಸಿಕೊಂಡೇ ಸ್ಥಳೀಯಾಡಳಿತ ಸಂಸ್ಥೆಗಳು ಮದುವೆಯನ್ನು ನೋಂದಾಯಿಸಿಕೊಳ್ಳಬೇಕು ಎಂದು ಕೋರ್ಟು ಆದೇಶಿಸಿದೆ.

ಬೇರೆಬೇರೆ ಧರ್ಮದವರು ಪರಸ್ಪರ ವಿವಾಹವಾದರೆ ಅವರಿಗೆ ಎಸ್‌ಎನ್‌ಡಿಪಿ ಸಭೆಯಂತಹ ಸಂಸ್ಥೆಗಳು ನೀಡಿದ ವಿವಾಹ ಸರ್ಟಿಫಿಕೇಟು ಕಾನೂನುಬದ್ಧವಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರಕಾರ ವಿವಾಹ ನಮೂದಿಸುವ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. ವಧುವರರು ಬೇರೆ ಬೇರೆ ಧರ್ಮದವರಾಗಿದ್ದರೆ ಸ್ಪೆಶಲ್ ಮ್ಯಾರೇಜ್ ಆಕ್ಟ್ ಪ್ರಕಾರ ವಿವಾಹ ನೋಂದಣಿ ಮಾಡುವುದು ಸರಿಯಾದ ಕ್ರಮವೆಂದು ಹೈಕೋರ್ಟ್ ತಿಳಿಸಿದೆ. ಕ್ರೈಸ್ತ ಸಮುದಾಯದ ಹುಡುಗಿಯನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂದು ಹುಡುಗಿಯ ಅಜ್ಜಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮುಂದಿಟ್ಟು ಹೈಕೋರ್ಟ್ ಈ ಆದೇಶ ಹೊರಡಿಸಿದೆ ಎಂದು ವರದಿ ತಿಳಿಸಿದೆ.

   ಹುಡುಗಿಯನ್ನು ಹಾಸ್ಟೆಲ್‌ನಿಂದ ಮನೆಗೆ ಹೋಗುವುದು ಎಂದು ಹೇಳಿ ಹಿಂದೂ ಸಮುದಾಯದ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದು,ಇವರಿಬ್ಬರೂ ಕಾನೂನು ಪ್ರಕಾರ ವಿವಾಹ ಆಗಿಲ್ಲ ಎಂದು ಸೂಚಿಸಿ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಸೂಚನೆ ಪ್ರಕಾರ ಅವರಿಬ್ಬರು ಕೋರ್ಟ್‌ನಲ್ಲಿ ಹಾಜರಿದ್ದರು. ತಾವು ಮದುವೆಯಾಗಿದ್ದೇವೆ ಎಂಬುದಕ್ಕೆ ಪುರಾವೆಯಾಗಿ ಇವರು ಎಸ್‌ಎನ್‌ಡಿಪಿ ಸಭೆ ನೀಡಿದ ಮದುವೆ ಸರ್ಟಿಫಿಕೇಟ್‌ನ್ನು ಕೋರ್ಟಿಗೆ ಸಲ್ಲಿಸಿದ್ದರು.

 ಸರ್ಟಿಫಿಕೇಟನ್ನು ಪರಿಶೀಲಿಸಿದ ಕೋರ್ಟ್ ಎಸ್‌ಎನ್‌ಡಿಪಿ ಸಭೆ ತಪ್ಪಾಗಿ ಮದುವೆ ಸರ್ಟಿಫಿಕೇಟ್ ನೀಡಿದ್ದಕ್ಕಾಗಿ ಅದನ್ನು ತರಾಟೆಗೆತ್ತಿಕೊಂಡಿದೆ. ಎರಡು ಧರ್ಮವಿಭಾಗದವರ ಮದುವೆಯನ್ನು 1954ರ ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರ ನೋಂದಾವಣೆ ನಡೆಸಬೇಕಾಗಿದೆ. ಇದಕ್ಕಿಂತ ಮೊದಲು ಕೂಡಾ ಶಿವಗಿರಿ ಮಠ ಮದುವೆ ಸರ್ಟಿಫಿಕೇಟ್ ನೀಡಿದ ಪ್ರಕರಣ ಕೋರ್ಟಿಗೆ ಬಂದಿದೆ. ಇಂತಹ ಧಾರಾಳ ಪ್ರಕರಣಗಳು ಆಗುತ್ತಿವೆ. ಸಮುದಾಯದ ಸಂಘಟನೆಗಳ ಇಂತಹ ಕ್ರಮಸಮಾಜವನ್ನು ತಪ್ಪುದಾರಿಗೊಯ್ಯುವಂತಾಗಿದೆ.ಇಂತಹ ಸರ್ಟಿಫಿಕೇಟ್‌ಗಳ ಆಧಾರದಲ್ಲಿ ಪತಿಪತ್ನಿಯರೆಂದು ನಂಬಿ ಮಹಿಳೆ ಮತ್ತು ಪುರುಷರ ಬದುಕುನಡೆಸುತ್ತಿದ್ದಾರೆ. ಇವರು ಸಂಬಂಧವನ್ನು ಕಡಿದುಕೊಂಡರೆ ದಂಪತಿ ಎಂಬ ನೆಲೆಯಲ್ಲಿ ಇವರಿಗೆ ಕಾನೂನಾತ್ಮಕವಾಗಿ ಯಾವುದೇ ಸೌಲಭ್ಯವೂ ದೊರಕುವುದಿಲ್ಲ ಎಂದು ಕೋರ್ಟ್‌ಬೆಟ್ಟು ಮಾಡಿದೆ.

ಆನಂತರ ಇಂತಹ ಸಂಘಟನೆಗಳು ನೀಡುವ ಸರ್ಟಿಫಿಕೇಟ್‌ಗಳ ಆಧಾರದಲ್ಲಿಮದುವೆ ರಿಜಿಸ್ಟರ್ ಮಾಡಿಕೊಳ್ಳುವುದನ್ನು ತಡೆಯಬೇಕೆಂದು ಕೋರ್ಟ್ ಆದೇಶಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News