×
Ad

ಹರ್ಯಾಣದ ಮಾಜಿ ಸಿಎಂ ಹೂಡಾ ಮನೆಗೆ ಸಿಬಿಐ ದಾಳಿ

Update: 2016-09-03 23:40 IST

ಚಂಡಿಗಡ, ಸೆ.3: ದಿಲ್ಲಿಯಿಂದ 45 ಕಿ.ಮೀ. ದೂರದ ಮಾನೇಸರ್‌ನಲ್ಲಿರುವ ಜಮೀನೊಂದರ ಹಗರಣದ ಸಂಬಂಧ ಶನಿವಾರ ಸಿಬಿಐ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದೆ.

ದಿಲ್ಲಿ, ಚಂಡಿಗಡ, ರೋಹ್ಟಕ್ ಹಾಗೂ ಗುರು ಗ್ರಾಮಗಳಲ್ಲಿ 20 ಸ್ಥಳಗಳಿಗೆ ದಾಳಿ ನಡೆಸಿರುವ ಸಿಬಿಐ, ಉನ್ನತಾಧಿಕಾರಿ ಎಸ್.ಎಸ್.ಧಿಲ್ಲಾನ್ ಹಾಗೂ ಇಬ್ಬರು ಮಾಜಿ ಅಧಿಕಾರಿಗಳಾದ ಎಂ.ಎಲ್.ತಯಾಲ್ ಮತ್ತು ಛತ್ತರ್ ಸಿಂಗ್‌ರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದೆಯೆಂದು ವರದಿಯಾಗಿದೆ.
ಮುಂಜಾನೆ 8ರ ಸುಮಾರಿಗೆ ಸಿಬಿಐ ತಂಡವೊಂದು ಕಾಂಗ್ರೆಸ್ ನಾಯಕ ಹೂಡಾರ, ಹರ್ಯಾಣದ ರೋಹ್ಟಕ್ ಹಾಗೂ ಪಂಚಕುಲಾಗಳಲ್ಲಿರುವ ಮನೆಗಳಿಗೆ ಆಗಮಿಸಿತ್ತು.
ಜಮೀನನ್ನು ಖಾಸಗಿ ಬಿಲ್ಡರ್‌ಗಳಿಗೆ ಮಾರಲಾಗಿದೆ ಯೆಂದು ಆರೋಪಿಸಲಾಗಿದೆ. ಈ ವ್ಯಾಪಾರದಲ್ಲಿ ಗ್ರಾಮಸ್ಥರಿಗೆ ರೂ. 1,500 ಕೋಟಿ ವಂಚನೆ ಮಾಡಲಾಗಿದೆಯೆಂದು ಕಳೆದ ವರ್ಷ ಸಿಬಿಐ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News