ನಕಲಿ ಡಿಗ್ರಿ ವಿವಾದ: ಸ್ಮತಿಗೆ ಸಮನ್ಸ್ ಕುರಿತು ಆದೇಶ ಸೆ.15ಕ್ಕೆ ನಿಗದಿ
Update: 2016-09-03 23:41 IST
ಹೊಸದಿಲ್ಲಿ, ಸೆ.3: ವಿವಿಧ ಚುನಾವಣೆಗಳಿಗೆ ಸ್ಪರ್ಧಿಸುವ ವೇಳೆ ಚುನಾವಣಾ ಆಯೋಗಕ್ಕೆ ಶೈಕ್ಷಣಿಕ ಅರ್ಹತೆಯ ಕುರಿತು ತಮ್ಮ ಮಾಹಿತಿ ನೀಡಿರುವ ಆರೋಪದ ಬಗ್ಗೆ ದಾಖಲಾಗಿರುವ ದೂರೊಂದರ ಸಂಬಂಧ ಕೇಂದ್ರ ಸಚಿವೆ ಸ್ಮತಿ ಇರಾನಿಯವರಿಗೆ ಸಮನ್ಸ್ ಕಳುಹಿಸಬೇಕೇ ಎಂಬ ಕುರಿತು ಆದೇಶವನ್ನು ದಿಲ್ಲಿಯ ನ್ಯಾಯಾ ಲಯವೊಂದು ಇಂದು ಮೀಸಲಿರಿಸಿದೆ.
ಹವ್ಯಾಸಿ ಬರಹಗಾರ ಅಹ್ಮದ್ ಖಾನ್ ಎಂಬವರು ದೂರುದಾರರಾಗಿದ್ದಾರೆ. ಅವರ ಪರ ವಕೀಲರ ವಾದ ಹಾಗೂ ಚುನಾವಣಾ ಆಯೋಗ ಮತ್ತು ದಿಲ್ಲಿ ವಿಶ್ವವಿದ್ಯಾಲಯಗಳು ಸ್ಮತಿಯವರ ಶೈಕ್ಷಣಿಕ ಪದವಿಗಳ ಕುರಿತು ಸಲ್ಲಿಸಿರುವ ವರದಿಗಳನ್ನು ಪರಾಂಬರಿಸಿದ ಮೆಟ್ರೊಪಾಲಿಟನ್ ಮ್ಯಾಜಿ ಸ್ಟ್ರೇಟ್ ಹರ್ವಿಂದರ್ ಸಿಂಗ್, ತೀರ್ಪಿನ ದಿನಾಂಕವನ್ನು ಸೆ.15ಕ್ಕೆ ನಿಗದಿಗೊಳಿಸಿದ್ದಾರೆ.