ದಭಾಂಗ್-3ಗೂ ಸೋನಾಕ್ಷಿಯೇ ಹೀರೋಯಿನ್

Update: 2016-09-04 06:10 GMT

ಸೂಪರ್‌ಹಿಟ್ ಬಾಲಿವುಡ್ ಚಿತ್ರ ದಬಾಂಗ್ ನ ಮೂರನೆ ಭಾಗವನ್ನು ನಿರ್ಮಿಸುವ ಬಗ್ಗೆ ನಿರ್ಮಾಪಕ ಅರ್ಬಾಝ್ ಖಾನ್ ಅಕೃತವಾಗಿ ಪ್ರಕಟಿಸಿದ ಬೆನ್ನಲ್ಲೇ ಚಿತ್ರದ ನಾಯಕಿ ಯಾರಿರಬಹುದೆಂಬ ಬಗ್ಗೆ ಸಾಕಷ್ಟು ಊಹಾಪೋಹಗಳೆದಿದ್ದವು. ದಬಾಂಗ್‌ನ ಮೊದಲ ಎರಡು ಭಾಗಗಳಲ್ಲಿ ಸಲ್ಮಾನ್‌ಖಾನ್‌ಗೆ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಅಭಿನಯಿಸಿದ್ದರು. ಅಷ್ಟೇ ಅಲ್ಲ ಈ ಚಿತ್ರಗಳಲ್ಲಿ ‘ರಜ್ಜೋ’ ಪಾತ್ರದಲ್ಲಿ ಅಕೆಯ ಅಭಿನಯ ಪ್ರೇಕ್ಷಕರ ಅಪಾರ ಪ್ರಶಂಸೆಯನ್ನು ಗಿಟ್ಟಿಸಿತ್ತು.

ಆದರೆ ದಬಾಂಗ್ 3ರಲ್ಲಿ ಸೋನಾಕ್ಷಿ ಬದಲಿಗೆ ಬೇರೆ ನಟಿಗೆ ಚಾನ್ಸ್ ನೀಡುವಂತೆ ಸಲ್ಮಾನ್ ಖಾನ್ ಶಿಾರಸು ಮಾಡಿದ್ದರೆಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಈ ಎಲ್ಲಾ ವದಂತಿಗಳಿಗೆ ತೆರೆಬಿದ್ದಿದೆ. ದಬಾಂಗ್ 3ಕ್ಕೂ ಸೋನಾಕ್ಷಿಯೇ ಹೀರೋಯಿನ್ ಎಂದು ಇದೀಗ ಕನ್‌ರ್ಮ್ ಆಗಿದೆ. ಆದರೆ ಸೋನಾಕ್ಷಿಯ ಜೊತೆಗೆ ಇನ್ನೋರ್ವ ಖ್ಯಾತ ನಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದಬಾಂಗ್ 3ನಲ್ಲಿಯೂ ತಾನು ನಟಿಸಲಿರುವುದು ಸೋನಾಕ್ಷಿಗೆ ತುಂಬಾ ಖುಷಿತಂದಿದೆ. ಚಿತ್ರದಲ್ಲಿ ತನ್ನ ರಜ್ಜೋ ಪಾತ್ರವು ಎಷ್ಟು ಚಿಕ್ಕದಾಗಿದ್ದರೂ ಪರವಾಗಿಲ್ಲ, ಆ ಪಾತ್ರವನ್ನು ಮತ್ತೆ ನಿರ್ವಹಿಸಲಿರುವುದು ನನಗೆ ಹೆಮ್ಮೆಯೆನಿಸುತ್ತದೆ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News