×
Ad

ಹಣವಿಲ್ಲವೆಂದು ಚಿತಾಗಾರದವರು ವಾಪಸ್ ಕಳುಹಿಸಿದ ಮೇಲೆ ಪತ್ನಿಯ ಅಂತ್ಯಕ್ರಿಯೆಗಾಗಿ ಬೀದಿಗಿಳಿದ ಆದಿವಾಸಿ

Update: 2016-09-05 09:15 IST

ನೀಮುಚ್ (ಮಧ್ಯಪ್ರದೇಶ), ಸೆ.5: ಪತ್ನಿಯ ಶವಸಂಸ್ಕಾರಕ್ಕೆ ಸ್ಮಶಾನಕ್ಕೆ ಆಗಮಿಸಿದ್ದ ವ್ಯಕ್ತಿಯ ಬಳಿ ಹಣವಿಲ್ಲವೆಂಬ ಕಾರಣಕ್ಕೆ ಸ್ಮಶಾನದವರು ಅಂತ್ಯಕ್ರಿಯೆ ನೆರವೇರಿಸಲು ನಿರಾಕರಿಸಿದ ಅಮಾನವೀಯ ಘಟನೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ.
ನೀಮುಚ್ ಜಿಲ್ಲೆಯ ರತ್ನಗಢ ಗ್ರಾಮದ ವ್ಯಕ್ತಿ ಕೊನೆಗೆ ಎಸೆದ ಕಾಗದ, ಟೈರು, ಪ್ಲಾಸ್ಟಿಕ್ ಚೀಲ ಹಾಗೂ ರೆಂಬೆ ಕೊಂಬೆಗಳನ್ನು ಚಿಂದಿಯಿಂದ ಆಯ್ದು ಪತ್ನಿಯ ಶವ ಸಂಸ್ಕಾರ ನೆರವೇರಿಸಿದರು. ಇತ್ತೀಚೆಗೆ ಒಡಿಶಾದ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸಲು ವಾಹನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 12 ಕಿಲೋಮೀಟರ್ ದೂರ ಪತ್ನಿಯ ಶವವನ್ನು ಹೆಗಲಲ್ಲೇ ಹೊತ್ತು ಸಾಗಿದ ಪ್ರಕರಣದ ಬಳಿಕ ಇದೀಗ ಮತ್ತೊಂದು ಇಂಥ ಅಮಾನವೀಯ ಪ್ರಕರಣ ವರದಿಯಾಗಿದೆ.
 ಪತ್ನಿ ಸಾವಿನ ಬಳಿಕ ಪಂಚಾಯ್ತಿಯ ಕಠಿಣ ನೀತಿಯಿಂದಾಗಿ ಜಗದೀಶ್ ಭಿಲ್ ಎಂಬಾತ ಮೂರು ಗಂಟೆಗಳ ಕಾಲ ಚಿಂದಿ ಆಯ್ದು, ಅಂತ್ಯಸಂಸ್ಕಾರ ನೆರವೇರಿಸಿದ. ಈತ ಚಿಂದಿ ಆಯುವುದನ್ನು ಕಂಡ ಕೆಲವರು, ಅಷ್ಟು ಶ್ರಮಪಟ್ಟು ಶವ ಸಂಸ್ಕಾರ ಮಾಡುವ ಬದಲು ಶವವನ್ನು ನದಿಗೆ ಎಸೆಯುವಂತೆ ಸಲಹೆ ಮಾಡಿದರು. ಶುಕ್ರವಾರ ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮಾನವ ಗೌರವಕ್ಕಾಗಿ ಜೀವನ ಸವೆಸಿದ ಮದರ್ ತೆರೇಸಾಗೆ ಸಂತ ಪದವಿ ಕರುಣಿಸಿದ ಸಂಭ್ರಮದಲ್ಲಿ ಇಡೀ ವಿಶ್ವ ಇದ್ದಾಗ ಇಂಥ ಬರಸಿಡಿಲಿನಂಥ ಈ ಸುದ್ದಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News