ಹರ್ಯಾಣದ ಜಾನಪದ ಗಾಯಕಿ ಸ್ವಪ್ನಾ ಚೌಧರಿ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನ
ಹರ್ಯಾಣ, ಸೆ.5: ಹರ್ಯಾಣದ ಜಾನಪದ ಗಾಯಕಿ ಸ್ವಪ್ನಾ ಚೌಧರಿ ತನ್ನ ವಿರುದ್ಧ ದಲಿತರ ನಿಂದನೆ ಆರೋಪ ದಾಖಲಾದ ಕಾರಣಕ್ಕಾಗಿ ದಕ್ಷಿಣ ದಿಲ್ಲಿಯ ನಜಾಫ್ ಗಡದ ತನ್ನ ಮನೆಯಲ್ಲಿ ಆತ್ಮ ಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಸ್ವಪ್ನಾ ಚೌಧರಿ ಅವರು ಹಾಡಿನಲ್ಲಿ ದಲಿತರನ್ನು ನಿಂದಿಸಿದ ಆರೋಪದಲ್ಲಿ ಆಕೆಯ ವಿರುದ್ಧ ಕಳೆದ ಜುಲೈನಲ್ಲಿ ಎಸ್‌ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದರಿಂದ ನೊಂದುಕೊಂಡಿದ್ದ ಸ್ವಪ್ನಾ ತನ್ನ ಮನೆಯಲ್ಲಿ ಏಳು ಪುಟಗಳ ದೆತ್ ನೋಟ್ ಬರೆದಿಟ್ಟು ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಪ್ನಾ ಚೌಧರಿ ಅವರ ಹಾಡೊಂದರಲ್ಲಿ ದಲಿತರ ನಿಂದನೆಯಾಗಿದೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. . ಅಲ್ಲದೆ ಅವರಿಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅವಮಾನಕರ ಸಂದೇಶಗಳು ರವಾನೆಯಾಗಿತ್ತು. ಇದರಿಂದಾಗಿ ಅವರು ಬಹಳಷ್ಟು ನೊಂದುಕೊಂಡಿದ್ದರು ಎಂದು ತಿಳಿದು ಬಂದಿದೆ.