ಜಿ.20 ಶೃಂಗಸಭೆ :ಕಪ್ಪುಹಣ , ಭ್ರಷ್ಟಾಚಾರ ಹೆಚ್ಚಳಕ್ಕೆ ಪ್ರಧಾನಿ ಮೋದಿ ಕಳವಳ
Update: 2016-09-05 11:19 IST
ಹಂಗ್'ಝೌ, ಸೆ.5: ಕಪ್ಪು ಹಣ ಮತ್ತು ಭ್ರಷ್ಟಾಚಾರ ಹೆಚ್ಚಳದ ಬಗ್ಗೆ ಜಿ 20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಇಂದು ಕಳವಳ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಪ್ಪು ಹಣ ಮತ್ತು ತೆರಿಗೆ ಕಳ್ಳತನವನ್ನು ನಿಯಂತ್ರಿಸಲು ಎಲ್ಲ ದೇಶಗಳು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ, ಕಪ್ಪುಹಣ ಮತ್ತು ತೆರಿಗೆ ಕಳ್ಳತನವನ್ನು ನಿಯಂತ್ರಿಸುವುದರಿಂದ ಉತ್ತಮ ಆಡಳಿತ ನಡೆಸಲು ಸಾಧ್ಯ ಎಂದರು.
ಚೀನಾದ ಹಂಗ್'ಝೌ ನಗರದಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ.20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪ್ರಬಲ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ 20 ರಾಷ್ಟ್ರಗಳಾಗಿರುವ ಆಸ್ಟ್ರೇಲಿಯ, ಅರ್ಜೆಂಟೀನ, ಬ್ರೆಝಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಶ್ಯ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕ, ದಕ್ಷಿಣ ಕೊರಿಯಾ, ಟರ್ಕಿ, ಗ್ರೇಟ್ ಬ್ರಿಟನ್, ಅಮೆರಿಕ ದೇಶಗಳು ಪಾಲ್ಗೊಂಡಿದೆ.