ಕರಾಚಿಯಲ್ಲಿ ಹಿಂದೂ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ
Update: 2016-09-05 15:48 IST
ಕರಾಚಿ,ಸೆ. 5: ಪಾಕಿಸ್ತಾನದ ಕರಾಚಿಯ ಲ್ಯಾರಿ ಕ್ಷೇತ್ರದಲ್ಲಿ ಕೆಲವು ಆಯುಧಧಾರಿಗಳು 25ವರ್ಷದ ಹಿಂದೂ ಯುವಕನನ್ನುಗುಂಡಿಟ್ಟು ಸಾಯಿಸಿದ ಘಟನೆ ವರದಿಯಾಗಿದೆ.
ಲ್ಯೋರಿಯ ಪೊಲೀಸ್ ಅಧೀಕ್ಷಕರಾದ ಅಫ್ತಾಬ್ ನಿಝಾಮಾನಿ ತಿಳಿಸಿರುವ ಪ್ರಕಾರ, ರವಿವಾರ ಸಂಜೆ ಶಾಮ್ ಎಂಬ ಓರ್ವ ವ್ಯಕ್ತಿಯ ಮೇಲೆ ಕೆಲವು ಅಜ್ಞಾತ ಆಯುಧಧಾರಿಗಳು ಗುಂಡು ಹಾರಿಸಿದ್ದಾರೆ. ಕೂಡಲೇ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಲ್ಲಿ ಆತ ಮೃತನಾಗಿದ್ದಾನೆ. ಮೃತ ಯುವಕ ಉಜೇರ್ ಬಲೂಚ್ ನೇತೃತ್ವದ ಸಮುದಾಯದಕ್ಕೆ ಸೇರಿದವನಾಗಿದ್ದು ಆತನನ್ನು ಕಾನೂನುಬಾಹಿರವಾಗಿ ಆಯುಧವನ್ನಿಟ್ಟುಕೊಂಡ ಆರೋಪದಲ್ಲಿ ಐದು ತಿಂಗಳ ಹಿಂದೆ ಬಂಧಿಸಲಾಗಿತ್ತು ಎಂದು ಅಫ್ತಾಬ್ ನಿಝಾಮಾನಿ ತಿಳಿಸಿದ್ದಾರೆಂದು ವರದಿಯಾಗಿದೆ.