ಉರ್ದುಭಾಷಾ ಪ್ರಚಾರಕ್ಕೆ "ಕೇರಳ ಯಾತ್ರಾ"

Update: 2016-09-06 08:36 GMT

ಕೋಝಿಕ್ಕೋಡ್, ಸೆಪ್ಟಂಬರ್ 6: ಉರ್ದು ಭಾಷೆಯ ಪ್ರಚಾರ ಕ್ಕಾಗಿ ಸುಹಾನಾ ಸಫರ್ ಎಂಬ ಹೆಸರಿನಲ್ಲಿ ಕೇರಳ ಉರ್ದುಯಾತ್ರಾ ನಡೆಸಲು ತಹ್ರೀಕೆ ಉರ್ದು ಕೇರಳ ಇದರ ನೇತೃತ್ವದಲ್ಲಿ ನಡೆದ ವಿವಿಧ ಉರ್ದು ಸಂಘಟನೆಗಳ ಸಭೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಉರ್ದುಗಝಲ್‌ಗಳು ಪರಂಪರಾಗತ ಕಲೆಗಳನ್ನು ಪ್ರಸ್ತುತಪಡಿಸಿ ಎಪ್ರಿಲ್ ಪ್ರಥಮವಾರದಲ್ಲಿ ಕಾಸರಗೋಡಿನಿಂದ ಯಾತ್ರಾ ಆರಂಭಗೊಂಡು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ. ಉರ್ದು ಐತಿಹಾಸಿಕ ಸ್ಥಳಗಳು ಸಂಸ್ಥೆಗಳನ್ನು ಸಂದರ್ಶಿಸುವುದು ಸಾರ್ವಜನಿಕರ ನಡುವೆ ಭಾಷೆಯ ಮಹತ್ವವನ್ನು ತಿಳಿಸಿಕೊಡಲಿರುವ ಯಾತ್ರೆಯಲ್ಲಿ ಹಿರಿಯ ಉರ್ದುಭಾಷಾ ಪ್ರಚಾರಕರನ್ನು ಗೌರವಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ತೆಹ್ರೀಕೆ ಉರ್ದು ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಸೀಮ್ ಶೇಖ್, ಉಬೈದ್ ರಹ್ಮಾನ್ ಅಂಬಾರ್, ಡಾ.ರಿಯಾರ್ ಅಹ್ಮದ್ ತಲಶ್ಶೇರಿ . ಕೆಯುಟಿಐ ರಾಜ್ಯಾಧ್ಯಕ್ಷ ಎಂ. ಹುಸೈನ್ ಮೊದಲಾದವರು ಭಾಗವಹಿಸಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News