ನಿನ್ನ ಮಕ್ಕಳು ಆತ್ಮಹತ್ಯಾ ಬಾಂಬರ್ ಆಗುತ್ತಾರೆಯೇ ?
ಹೊಸದಿಲ್ಲಿ, ಸೆ. 6 : ಇತ್ತೀಚಿಗೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ , ಪಾಕಿಸ್ತಾನದಲ್ಲಿರುವ ಸಯ್ಯದ್ ಸಲಾಹುದ್ದೀನ್ ಕಾಶ್ಮೀರವನ್ನು ಭಾರತೀಯ ಸೇನೆಯ ಪಾಲಿನ ಸ್ಮಶಾನವಾಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸಲಾಹುದ್ದೀನ್ " ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರದ ಮಾರ್ಗ ಇಲ್ಲ ಎಂಬುದನ್ನು ಅಲ್ಲಿನ ನಾಯಕರು, ಜನರು ಹಾಗು ಮುಜಾಹಿದೀನ್ ಗಳು ತಿಳಿದುಕೊಳ್ಳಬೇಕು " ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮೇಜರ್ ಗೌರವ್ ಆರ್ಯ ಅವರು ಸಲಾಹುದ್ದೀನ್ ಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಇಡೀ ಜಿಹಾದಿ ಚಳವಳಿಯಲ್ಲಿ ಇಂದು ಸಲಾಹುದ್ದೀನ್ ಸಂಪೂರ್ಣ ಅಪ್ರಸ್ತುತರಾಗಿದ್ದರೆ ಎಂದು ಹೇಳಿರುವ ಮೇಜರ್ ಗೌರವ್ ನಿಜವಾಗಿ ಬುರ್ಹಾನ್ ವಾನಿ ಸಾಯಬೇಕೆಂಬುದೇ ಸಲಾಹುದ್ದೀನ್ ಬಯಕೆಯಾಗಿತ್ತು. ಬುರ್ಹಾನ್ ಜನಪ್ರಿಯತೆಯಿಂದ ಸಲಾಹುದ್ದೀನ್ ಕಂಗೆಟ್ಟಿದ್ದ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿಲಾಸಿ ಬಂಗಲೆಯಲ್ಲಿರುವ ಸಲಾಹುದ್ದೀನ್ ತನ್ನ ಐದು ಗಂಡು ಮಕ್ಕಳನ್ನು ಭಾರತ ಹಾಗು ಬೇರೆ ದೇಶಗಳಲ್ಲಿ ಸುಖವಾಗಿ ಬದುಕಲು ಕಳಿಸಿ ಬೇರೆಯವರನ್ನು ಪ್ರಚೋದಿಸುತ್ತಾನೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಮುಂದೆ ತನ್ನ ಮಕ್ಕಳನ್ನು ಆತ್ಮಹತ್ಯಾ ಬಾಂಬರ್ ಆಗಲು ಕಳಿಸುತ್ತೀರಾ ಎಂದು ಸವಾಲು ಹಾಕಿದ್ದಾರೆ.
ಮೇಜರ್ ಗೌರವ್ ಅವರ ಪೂರ್ಣ ಪೋಸ್ಟ್ ಇಲ್ಲಿದೆ :