×
Ad

ಓಲಾ ಕ್ಯಾಬ್ ನಲ್ಲಿ 450 ಕಿ.ಮೀ ಪ್ರಯಾಣಕ್ಕೆ 9.15 ಲಕ್ಷ ಬಿಲ್ !

Update: 2016-09-06 15:34 IST

ಹೊಸದಿಲ್ಲಿ,ಸೆ.6: ಹೈದರಾಬಾದ್‌ನ ರಿತೇಶ್ ಶೇಖರ್‌ಗೆ 450ಕಿಲೋಮೀಟರ್ ಪ್ರಯಾಣದ ಬಳಿಕ ಓಲಾ ಕ್ಯಾಬ್‌ಟ್ಯಾಕ್ಸಿ ಕಂಪೆನಿ ಮಾಡಿದ ಚಾರ್ಜು ನೋಡಿ ಅವರು ತಬ್ಬಿಬ್ಬಾಗಿದ್ದರು. ಯಾಕೆಂದರೆ ವಿಮಾನದಲ್ಲಿ ಇಡೀ ಜಗತ್ತನ್ನು ಸುತ್ತಿದರೆ ಆಗುವಷ್ಟು ಬಿಲ್‌ನ್ನು ಓಲಾಟ್ಯಾಕ್ಸಿ ಕಂಪೆನಿ ರಿತೇಶ್‌ರನ್ನು ಪಾವತಿಸುವಂತೆ ಹೇಳಿತ್ತು. ರಿತೇಶ್ ಆಗಸ್ಟ್ 24ರಂದು ಜುಬ್ಲಿ ಹಿಲ್‌ನಿಂದ ನಿಝಾಮಾಬಾದ್‌ವರೆಗೆ ಪ್ರಯಾಣಿಸಿದ್ದರು. ಅದಕ್ಕಾಗಿ ಅವರಿಗೆ ಓಲಾ ಕಂಪೆನಿ 9.15ಲಕ್ಷ ಬಿಲ್ ಮಾಡಿತ್ತು ಎಂದು ವರದಿಯಾಗಿದೆ.

ಭಾರೀ ಮೊತ್ತದಬಿಲ್ ಆ್ಯಪ್‌ನ ಪ್ರಮಾದದಿಂದಾಗಿ ಬಂದಿದೆ. ಓಲಾದ ಆ್ಯಪ್ ಮೊದಲು 5,000ರೂಪಾಯಿ ಬಿಲ್‌ನ್ನು ತೋರಿಸುತ್ತಿತ್ತು. ಆದರೆ ಪ್ರಯಾಣ ಮುಗಿದಾಗ ಆ್ಯಪ್ 85,427 ಕಿ.ಮೀ. ಪ್ರಯಾಣ ಆಗಿದೆ ಎಂದು ತೋರಿಸತೊಡಗಿತ್ತು. ಹೆಚ್ಚು ಸೊನ್ನೆ ಬಿದ್ದದ್ದರಿಂದ 9.000 ರೂಪಾಯಿ ತೋರಿಸುವಲ್ಲಿ ಆ್ಯಪ್ 9.15 ಲಕ್ಷ ಬಿಲ್ ತೋರಿಸಿದೆ ಎಂದು ರಿತೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಲ್ ನೋಡಿ ಕ್ಯಾಬ್‌ನ ಚಾಲಕ ಕೂಡಾ ಆಶ್ಚರ್ಯದಿಂದ ತಬ್ಬಿಬ್ಬಾಗಿದ್ದ.  ನಂತರ ಅರ್ಧಗಂಟೆ ತಪಾಸಣೆಯ ನಂತರ ಸರಿಯಾದ ಬಿಲ್ 4812 ರೂಪಾಯಿ ಬಿಲ್ ಬಂದಿತ್ತು. ಕೊನೆಗೆ ಓಲಾಕಂಪೆನಿ ತನ್ನ ತಪ್ಪಿಗಾಗಿ ರಿತೇಶ್‌ರಲ್ಲಿ ಕ್ಷಮೆಯಾಚಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News