ನಿದ್ದೆಯಿಂದೆದ್ದ ಮನೆಯೊಡೆಯ ಸ್ವಲ್ಪ ಸಮಯದ ನಂತರ ಕೊರಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆ
Update: 2016-09-06 16:24 IST
ತೊಡುಪುಝ,ಸೆ.6: ಮನೆಯೊಡೆಯ ಕೊರಳು ಕತ್ತರಿಸಿ ಮೃತನಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೊಡುಪುಝದಿಂದ ವರದಿಯಾಗಿದೆ. ಪೆರುಂಬಿಳ್ಳಿಚ್ಚಿರ ಕೊಲ್ಲಂ ಕುಡಿಯಿಲ್ ಮುಹಮ್ಮದ್ (52) ಮೃತವ್ಯಕ್ತಿಯಾಗಿದ್ದು ಮಂಗಳವಾರ ಬೆಳಗ್ಗೆ ಅವರು ನಿದ್ದೆಯಿಂದ ಎದ್ದ ಸ್ವಲ್ಪಸಮಯದ ಬಳಿಕ ಮಲಗುವ ಕೋಣೆಯಲ್ಲಿ ಕೊರಳು ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ವರದಿಯೊಂದು ತಿಳಿಸಿದೆ.
ಕೂಡಲೇ ತೊಡುಪುಝದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರೂ ಪ್ರಯೋಜನವಾಗಲಿಲ್ಲ. ಅವರು ಅಲ್ಲಿ ಮೃತರಾದರು. ತೊಡುಪುಝ ಪೊಲೀಸರು ತನಿಖೆ ಆರಂಭಿಸಿದ್ದು, ಪಾರ್ಥಿವಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಟ್ಟಯಂ ಮೆಡಿಕಲ್ ಕಾಲೇಜುಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.