ಕೇಜ್ರಿವಾಲ್‌ರಲ್ಲಿದ್ದ ನಿರೀಕ್ಷೆ ಕಳೆದುಕೊಂಡಿದ್ದೇನೆ: ಅಣ್ಣಾ ಹಝಾರೆ
ರಾಲೆಗನ್ ಸಿದ್ಧಿ,ಸೆ.6: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಲ್ಲಿದ್ದ ನಿರೀಕ್ಷೆಯನ್ನು ಕಳೆದುಕೊಂಡಿದ್ದೇನೆ ಎಂದು ಅಣ್ಣಾ ಹಝಾರೆ ಹೇಳಿದ್ದಾರೆ. ಎಎಪಿ ಸಚಿವರು ಜೈಲಿಗೆ ಹೋಗುವುದು ಮತ್ತು ವಂಚನೆ ನಡೆಸುತ್ತಿರುವುದಕ್ಕಾಗಿ ತಾನು ದುಃಖಿಸುತ್ತಿದ್ದೇನೆಂದು ಅವರು ಹೇಳಿದ್ದಾರೆ. "ನನಗೆ ನೋವಿದೆ. ಕೇಜ್ರಿವಾಲ್ ತನ್ನಜೊತೆ ಇದ್ದಾಗ ಗ್ರಾಮಸ್ವರಾಜ್ ಪುಸ್ತಕ ಬರೆದಿದ್ದರು. ಆದರೆ ಇದು ಗ್ರಾಮಸ್ವರಾಜ್ಯವೇ" ಎಂದು ಪ್ರಶ್ನಿಸಿ ವಿಷಾದ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.
ಅಶ್ಲೀಲ ಸಿಡಿ ಹೊರಬಂದು ಮಾಜಿ ಸಚಿವ ಸಂದೀಪ್‌ಕುಮಾರ್‌ರನ್ನು ನಿನ್ನೆ ಪೊಲೀಸರು ಬಂಧಿಸಿದಬೆನ್ನಿಗೆ ಹಝಾರೆ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟಿಗೆ ಹಾಜರು ಪಡಿಸಿದ್ದ ಸಂದೀಪ್‌ಕುಮಾರ್‌ರಿಗೆ ಮೂರು ದಿವಸಗಳ ಕಸ್ಟಡಿ ವಿಧಿಸಲಾಗಿತ್ತು. ಮಹಿಳೆಯೊಬ್ಬರು ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಸಂದೀಪ್‌ಕುಮಾರ್‌ರನ್ನು ಬಂಧಿಸಿದ್ದರು. ರೇಶನ್ ಕಾರ್ಡ್ ಕೊಡಿಸುತ್ತೇನೆ ಎಂದು ಮನೆಗೆ ಕರೆಯಿಸಿ ಸಂದೀಪ್ ಮಾದಕವಸ್ತು ನೀಡಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ. ಈಗಾಗಲೇ ಆಮ್ ಆದ್ಮಿಪಾರ್ಟಿ ಪ್ರಾಥಮಿಕ ಸದಸ್ಯತ್ವದಿಂದ ಮತ್ತು ಸಚಿವ ಸ್ಥಾನದಿಂದ ಸಂದೀಪ್‌ರನ್ನು ವಜಾಗೊಳಿಸಲಾಗಿದೆ.