×
Ad

ಕೇರಳ ರಾಜ್ಯ ಬಿಜೆಪಿ ಕಚೇರಿಗೆ ಬಾಂಬೆಸೆತ!

Update: 2016-09-07 15:21 IST

ತಿರುವನಂತಪುರಂ,ಸೆಪ್ಟಂಬರ್7: ಬಿಜೆಪಿ ರಾಜ್ಯ ಸಮಿತಿಯ ಕಚೇರಿಗೆ ಅಜ್ಞಾತ ವ್ಯಕ್ತಿಗಳು ಬಾಂಬೆಸೆದಿದ್ದಾರೆಂದು ವರದಿಯಾಗಿದೆ. ತಿರುವನಂತಪುರಂ ಕುನ್ನುಕುಝಿಯ ಕಚೇರಿಗೆ ಬುಧವಾರ ರಾತ್ರಿ ಹನ್ನೆರಡು ಗಂಟೆಗೆ ಬಾಂಬೆಸೆಯಲಾಗಿದೆ.ಯಾರೂ ಗಾಯಗೊಂಡಿಲ್ಲ. ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಡ ಬಾಂಬ್ ಎಸೆದು ಪರಾರಿಯಾದರೆಂದು ಕಚೇರಿಯ ನೌಕರರು ತಿಳಿಸಿದ್ದಾರೆ.

ಬಿಜೆಪಿಯ ಹೊಸ ರಾಜ್ಯ ಸಮಿತಿ ಕಚೇರಿಗೆ ಬಾಂಬೆಸೆದವರ ದೃಶ್ಯ ಬಹಿರಂಗವಾಗಿದೆ. ಬೈಕ್‌ನಲ್ಲಿ ಬಂದ ಒಬ್ಬ ವ್ಯಕ್ತಿ ಸ್ಫೋಟಕ ವಸ್ತುಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ ಒಂದು ಕಡೆಯ ದೃಶ್ಯ ಮಾತ್ರ ಇದಾಗಿದ್ದು ಆದ್ದರಿಂದ ಯಾವ ವ್ಯಕ್ತಿ ಈಕೃತ್ಯವೆಸಗಿದ್ದಾನೆಂದು ಗುರುತಿಸಲು ಸಾಧ್ಯವಾಗಿಲ್ಲ. ಸ್ಥಳವನ್ನು ಫಾರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಸದ್ದುಕೇಳಿ ಕಚೇರಿಯೊಳಗಿದ್ದವರು ಹೊರಗೆ ಓಡಿ ಬಂದಾಗ ದುಷ್ಕರ್ಮಿಗಳ ತಂಡ ಪರಾರಿಯಾಗಿತ್ತು. ದಾಳಿಯ ಹಿಂದೆ ಸಿಪಿಐಎಂ ಇದೆ ಎಂದು ಬಿಜೆಪಿ ಆರೋಪಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News