ಇನ್ಸಾಟ್-3ಡಿಆರ್ ಕಕ್ಷೆಗೆ
Update: 2016-09-08 19:38 IST
ಹೊಸದಿಲ್ಲಿ, ಸೆ.8: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಘಟನೆ (ಇಸ್ರೊ) ಗುರುವಾರ ಜಿಎಸ್‌ಎಲ್‌ವಿ-ಎಫ್05 ರಾಕೆಟ್‌ನ ಮೂಲಕ ಇನ್‌ಸಾಟ್-3ಡಿಆರ್ ಹೆಸರಿನ ಅತ್ಯಾಧುನಿಕ ಹವಾಮಾನ ಉಪಗ್ರಹವೊಂದನ್ನು ಅಂತರಿಕ್ಷಕ್ಕೆ ಕಳುಹಿಸಿದೆ.
ಮೊದಲು ಸಂಜೆ 4:10ಕ್ಕೆ ನಿಗದಿಪಡಿಸಲಾಗಿದ್ದ ಉಡಾವಣಾ ಸಮಯವನ್ನು ಬಳಿಕ 4:50ಕ್ಕೆ ಮುಂದೂಡಲಾಗಿತ್ತು.
ಇನ್ಸಾಟ್-3ಡಿಆರ್ ಉಪಗ್ರಹ 2,211ಕಿ.ಗ್ರಾಂ ತೂಕವಿದ್ದು, ಅದನ್ನು ಭೂ-ವರ್ಗಾವಣೆ ಕಕ್ಷೆಯೊಂದರಲ್ಲಿ ಪ್ರಾಥಮಿಕವಾಗಿ ಇರಿಸಲಾಗಿತ್ತು. ಅದು ತನ್ನ ಚಾಲನಾ ವ್ಯವಸ್ತೆಯನ್ನು ಉಪಯೋಗಿಸಿ ನಿಯೋಜಿತ ಭೂ-ಸಮಾಣತರ ಕಕ್ಷೆಗೆ ಸಾಗಿದೆ.
8 ವರ್ಷ ಜೀವಿತಾವಧಿಯಿರುವ ಈ ಉಪಗ್ರಹದಲ್ಲಿ ಹವಾಮಾನ ಮಾದರಿ ಅಧ್ಯಯನ, ಮೇಲ್ಮೈ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯಕವಾಗುವ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.