ಬಿರಿಯಾನಿಗೆ ಕೈ ಹಾಕಿ ವ್ಯಾಪಾರಿಗಳ ಗಂಜಿಗೆ ಕುತ್ತು ತಂದ ಸರಕಾರ
ಮೇವತ್,ಸೆ.10 : ಬಿರಿಯಾನಿಯಲ್ಲಿ ಗೋಮಾಂಸವನ್ನೂ ಸೇರಿಸಲಾಗುತ್ತಿದೆಯೆಂಬ ದೂರುಗಳ ಆಧಾರದಲ್ಲಿ ಹರ್ಯಾಣ ರಾಜ್ಯದ ಮೇವತ್ ಜಿಲ್ಲೆಯ ಹಲವೆಡೆ ಪೊಲೀಸ್ ಅಧಿಕಾರಿಗಳು ಬಿರಿಯಾನಿ ಮಾರಾಟಗಾರರ ಮೇಲೆ ನಿಗಾ ಇಟ್ಟಿರುವ ಕಾರಣ ಈಗ ಬಿರಿಯಾನಿ ಮಾರಾಟಗಾರರು ಮುಖ್ಯವಾಗಿ ರಸ್ತೆ ಬದಿ ವ್ಯಾಪಾರಿಗಳು ತೀವ್ರ ಸಂಕಷ್ಟದಲ್ಲಿದ್ದಾರೆಂದು ಹಿಂದುಸ್ತಾನ್ ಟೈಮ್ಸ್ ವರದಿಯೊಂದು ತಿಳಿಸಿದೆ.
ಮೇವತ್ ಜಿಲ್ಲೆಯ ಮುಸ್ಲಿಂ ಬಾಹುಳ್ಯ ಪ್ರದೇಶವಾದ ನುಹ್ ಚೌಕ್ ನಲ್ಲಿ ಬಿರಿಯಾನಿ ಮಾರಾಟಗಾರರು ಅಲ್ಲಿನ ಜನಪ್ರಿಯ ‘ಗೋಷ್ಟ್’ ಇನ್ನು ಮುಂದೆ ಉಪಯೋಗಿಸುವ ಹಾಗಿಲ್ಲ. ಕೆಂಪು ಮಾಂಸ (ಗೋಮಾಂಸ, ಆಡಿನಹಾಗೂ ಕೆಲವೊಮ್ಮೆ ಎತ್ತಿನ ಮಾಂಸ) ಇಲ್ಲಿನ ಜನರಿಗೆ ಇಷ್ಟವಾದರೂ ಗೋಮಾಂಸವನ್ನು ಉಪಯೋಗಿಸುವ ಹಾಗಿಲ್ಲವಾದುದರಿಂದಬಿರಿಯಾನಿ ತಯಾರಕರು ಹಾಗೂ ಮಾರಾಟಗಾರರುಕೆಂಪು ಮಾಂಸ (ರೆಡ್ ಮೀಟ್) ಉಪಯೋಗಿಸುವುದನ್ನು ಬಿಟ್ಟು ಈಗ ಕೇವಲ ಕೋಳಿ ಮಾಂಸವನ್ನಷ್ಟೇ ತಮ್ಮ ಬಿರಿಯಾನಿಗಳಿಗೆ ಉಪಯೋಗಿಸಲಾರಂಭಿಸಿದ್ದಾರೆ.
ಅಥವಾ ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದಂತೆಯೇಅಧಿಕಾರಿಗಳು ಹಲವಾರು ಕಡೆಗಳಿಂದ ಬಿರಿಯಾನಿ ಸ್ಯಾಂಪಲ್ಲುಗಳನ್ನು ಸಂಗ್ರಹಿಸಿಅವುಗಳನ್ನು ಪರೀಕ್ಷಿಸಲಾಗಿ ಗೋಮಾಂಸವಿದೆಯೆಂದು ಪತ್ತೆಯಾಗಿತ್ತು.
ಅಧಿಕಾರಿಗಳಿಗಿಂತ ಹೆಚ್ಚಾಗಿ ಇಲ್ಲಿನಮಾರಾಟಗಾರರಲ್ಲಿ ಸ್ವಘೋಷಿತ ಗೋರಕ್ಷಕರ ಬಗ್ಗೆ ಹೆಚ್ಚು ಭಯವಿದೆ. ರಾಜ್ಯ ಸರಕಾರದ ಗೋ ರಕ್ಷಾ ಹಾಗೂ ಗೋ ಸಂವರ್ಧನಾ ಯೋಜನೆಯನ್ವಯ ಗೋಹತ್ಯೆ, ಮಾರಾಟ ಹಾಗೂ ಗೋಮಾಂಸ ಸೇವನೆ ಅಪರಾಧವಾಗಿದೆ.
ಮೊಹಮ್ಮದ್ ಅಕ್ಬರ್ ಎಂಬ ರಸ್ತೆ ಬದಿ ಬಿರಿಯಾನಿ ಮಾರಾಟಗಾರ ಹೇಳುವಂತೆ ಕಳೆದ ವಾರದ ತನಕ ನುಹ್ ಪ್ರದೇಶದಲ್ಲಿ 30 ಮಂದಿ ರಸ್ತೆ ಬದಿಗಳಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದರೆ ಈಗ ಅವರ ಸಂಖ್ಯೆಅರ್ಧಕ್ಕಿಂತಲೂ ಕಡಿಮೆಯಾಗಿದೆ. ಕಳೆದ 12 ವರ್ಷಗಳಿಂದ ಇಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿರುವ ಅಕ್ಬರ್ ಪ್ರಕಾರ ಇಂತಹ ಪರಿಸ್ಥಿತಿ ಬಿರಿಯಾನಿ ಮಾರಾಟಗಾರರಿಗೆ ಯಾವತ್ತೂ ಎದುರಾಗಿರಲಿಲ್ಲ.
‘‘ಮೇವತ್ ನ ಕೆಲ ಒಳ ಪ್ರದೇಶಗಳಿಂದ ನಮಗೆ ಗೋಮಾಂಸ ಪೂರೈಸಲಾಗುತ್ತಿತ್ತು. ಆದರೆ ಪೊಲೀಸರ ಕಾರ್ಯಾಚರಣೆಯ ನಂತರ ಅದು ನಿಂತಿದೆ,’’ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ಬಿರಿಯಾನಿ ಮಾರಾಟಗಾರರೊಬ್ಬರು ಹೇಳಿದ್ದಾರೆ.