×
Ad

ಬಿಜೆಪಿ ಮುಖಂಡನ ಕಾರಿನಲ್ಲಿ 3 ಕೋಟಿ ರೂ. ಪತ್ತೆ

Update: 2016-09-10 16:30 IST

ಹೊಸದಿಲ್ಲಿ, ಸೆ. 10  : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮೀಪಿಸುತ್ತಿರುವಾಗಲೇ ಕಾಂಚಾಣದ ಝಣಝಣ ಶುರುವಾಗಿದೆ. ಘಾಝಿಯಾಬಾದ್ ನಲ್ಲಿ ಬಿಜೆಪಿ ಮುಖಂಡ ಅನೂಪ್ ಅಗರ್ವಾಲ್ ಹಾಗು ಸಿದ್ಧಾರ್ಥ್ ಶುಕ್ಲ ಎಂಬವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಕಾರಿನಿಂದ ಪೊಲೀಸರು 3 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. 

ಇಲ್ಲಿನ ಇಂದಿರಾಪುರಮ್ ಪ್ರದೇಶದಲ್ಲಿ ತಪಾಸಣೆ ನಡೆಯುತ್ತಿರುವಾಗ  HR 26 AR 9662 ನೋಂದಣಿಯ ಕಾರು ಬ್ಯಾರಿಕೇಡ್ ಮುರಿದು ಹೋಗಲು ಪ್ರಯತ್ನಿಸಿದೆ. ತಕ್ಷಣ ಜಾಗೃತರಾದ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಈ ದೊಡ್ಡ ಮೊತ್ತ ಪತ್ತೆಯಾಗಿದೆ. 

ಕಾರಿನಲ್ಲಿದ್ದ ಬಿಜೆಪಿ ನಾಯಕರನ್ನು ವಶಕ್ಕೆ ತಗೆದುಕೊಳ್ಳಲಾಗಿದೆ. ಇದು ಕಪ್ಪು ಹಣವೇ ಎಂದು ಆದಾಯ ತೆರಿಗೆ ಇಲಾಖೆಯವರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಿಜೆಪಿ ನಾಯಕ ಅಶೋಕ್ ಮೊಂಗಾ ಎಂಬವರು ಇದು ಪಕ್ಷದ ವತಿಯಿಂದ ಉತ್ತರ ಪ್ರದೇಶ ಘಟಕಕ್ಕೆ ಕಳಿಸಲಾದ ಹಣ ಎಂದು ಲೆಟರ್ ಹೆಡ್ ನಲ್ಲಿ ಬರೆದ ಪಾತ್ರವೊಂದರ ಪ್ರತಿಯನ್ನು ತೋರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News