ಜೆ ಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆ : ಎಡರಂಗ ವಿದ್ಯಾರ್ಥಿಗಳಿಗೆ ಸ್ಪಷ್ಟ ಮುನ್ನಡೆ , ಎಬಿವಿಪಿಗೆ ಹಿನ್ನಡೆ
Update: 2016-09-10 17:02 IST
ಹೊಸದಿಲ್ಲಿ, ಸೆ. 10 : ಶುಕ್ರವಾರ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯ ಮತ ಎಣಿಕೆ ಶನಿವಾರ ನಡೆದಿದ್ದು ಇದುವರೆಗೆ ಮುಗಿದ ಎಣಿಕೆಯಲ್ಲಿ ಎಡ ಸಂಯುಕ್ತ ರಂಗದ ವಿದ್ಯಾರ್ಥಿಗಳು ಒಟ್ಟು ನಾಲ್ಕು ಸ್ಥಾನಗಳಲ್ಲಿ ಮೂರರಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ. ಎಬಿವಿಪಿ ಹಗು ಬಿ ಎ ಪಿ ಎಸ್ ಎ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭಇವಿಸಿದ್ದಾರೆ . ಎಸ್ ಎಫ್ ಐ ಹಾಗು ಎ ಐ ಎಸ್ ಎ ಒಂದಾಗಿ ಎಡ ಸಂಯುಕ್ತ ಕೂಟ ಎಬಿವಿಪಿ ಹಾಗು ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್ (ಬಿ ಎ ಪಿ ಎಸ್ ಎ) ಎದುರು ಭಾರೀ ಮುನ್ನಡೆ ಸಾಧಿಸಿದ್ದಾರೆ. ಕನ್ಹಯ್ಯ ಕುಮಾರ್ ಅವರ ಎ ಐ ಎಸ್ ಎಫ್ ಈ ಬಾರಿ ಕಣದಲ್ಲಿಲ್ಲ.