×
Ad

ಸಿರಿಯ ಯುದ್ಧವಿರಾಮಕ್ಕೆ ಅಮೆರಿಕ, ರಶ್ಯ ಅಸ್ತು

Update: 2016-09-10 23:48 IST

ವಾಶಿಂಗ್ಟನ್, ಸೆ. 10: ವಾರಗಳ ಅವಧಿಯ ಮಾತುಕತೆಯ ಬಳಿಕ, ಅಮೆರಿಕ ಮತ್ತು ರಶ್ಯ ಕೊನೆಗೂ ಸಿರಿಯದಲ್ಲಿ ಯುದ್ಧವಿರಾಮ ಕುರಿತ ಒಪ್ಪಂದವೊಂದಕ್ಕೆ ಬಂದಿವೆ. ಈ ಒಪ್ಪಂದವು ಐಸಿಸ್ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳನ್ನು ಜೊತೆಗೆ ತರುವ ಸಾಧ್ಯತೆಯಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಮತ್ತು ರಶ್ಯದ ವಿದೇಶಾಂಗ ಸಚಿವ ಸರ್ಗೀ ಲವ್ರೊವ್ ಜಿನೇವದಲ್ಲಿ ಈ ವಿಷಯವನ್ನು ಶುಕ್ರವಾರ ಪ್ರಕಟಿಸಿದರು.

ಒಪ್ಪಂದದ ಪ್ರಕಾರ, ಪ್ರತಿಪಕ್ಷದ ಪಡೆಗಳು ಕಾರ್ಯಾಚರಿಸುತ್ತಿರುವ ಸ್ಥಳಗಳಲ್ಲಿ ಸಿರಿಯದ ಸರಕಾರಿ ಪಡೆಗಳು ವೈಮಾನಿಕ ದಾಳಿ ನಡೆಸುವಂತಿಲ್ಲ ಎಂದು ಕೆರಿ ಹೇಳಿದರು. ಸೆಪ್ಟಂಬರ್ 12ರಂದು ಯುದ್ಧವಿರಾಮಕ್ಕೆ ಮರು ಬದ್ಧರಾಗುವಂತೆ ಪ್ರತಿಪಕ್ಷ ಮತ್ತು ಸರಕಾರಕ್ಕೆ ಉಭಯ ದೇಶಗಳು ಕರೆ ನೀಡುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News