×
Ad

ಪೂಂಚ್‌ನಲ್ಲಿ ಉಗ್ರಗಾಮಿಗಳ ದಾಳಿ: ಪೊಲೀಸ್ ಅಧಿಕಾರಿ ಮೃತ

Update: 2016-09-11 11:21 IST

ಪೂಂಚ್, ಸೆ.11: ಪೂಂಚ್ ಪಟ್ಟಣದಲ್ಲಿ ರವಿವಾರ ಬೆಳಗ್ಗಿನ ಜಾವ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ಓರ್ವ ಪೊಲೀಸ್ ಮೃತಪಟ್ಟರೆ, ಜಮ್ಮು-ಕಾಶ್ಮೀರದ ಸಬ್-ಇನ್‌ಸ್ಪೆಕ್ಟರ್ ಸಹಿತ ಮತ್ತಿಬ್ಬರಿಗೆ ಗಾಯವಾಗಿದೆ.

ಮೃತಪಟ್ಟ ಪೊಲೀಸ್ ಅಧಿಕಾರಿಯನ್ನು ಪೂಂಚ್ ಪೊಲೀಸ್‌ನ ಸಿಐಡಿಯ ವಿಶೇಷ ದಳದ ಹವಾಲ್ದಾರ್ ರಾಜು ಎಂದು ತಿಳಿದುಬಂದಿದೆ.

ಪೂಂಚ್ ಪಟ್ಟಣದಲ್ಲಿರುವ ನಿರ್ಮಾಣ ಹಂತದ ಸರಕಾರಿ ಕಟ್ಟಡದಲ್ಲಿ ಅವಿತುಕೊಂಡಿದ್ದ ಭಯೋತ್ಪಾದಕರು ಬೆಳಗ್ಗೆ 8 ಗಂಟೆಗೆ ಗುಂಡಿನ ದಾಳಿ ಆರಂಭಿಸಿದ್ದರು. ಭಯೋತ್ಪಾದಕರು ಎಕೆ-47ನ್ನು ಬಳಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News