×
Ad

ಓಣಂನಲ್ಲಿ ಭಾಗವಹಿಸಬಾರದು ಎಂಬ ಹೇಳಿಕೆಗೆ ಪಾಯಸ ಹಂಚಿ ಪ್ರತಿಭಟಿಸಿದ ಮುಸ್ಲಿಂ ಯುವಕ

Update: 2016-09-11 12:08 IST

ಕ್ಯಾಲಿಕಟ್, ಸೆ.11: ಮುಸ್ಲಿಮರು ಓಣಂ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಬಾರದು ಎಂದು ಕೆಲವು ಮುಸ್ಲಿಂ ಧಾರ್ಮಿಕ ವಿದ್ವಾಂಸರು ನೀಡಿರುವ ಹೇಳಿಕೆಯ ವಿರುದ್ಧ ಇಲ್ಲಿನ ಮುಸ್ಲಿಂ ಯುವಕನೊಬ್ಬ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಅವರು ಸಾರ್ವಜನಿಕವಾಗಿ ಪಾಯಸ ಹಂಚುವ ಮೂಲಕ ಈ ಹೇಳಿಕೆಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ಲೇಖಕ ಹಾಗೂ ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುವ ಫಾಯಿಝ್ ಉಮರ್ ಎಂಬ ಯುವಕ ಇಲ್ಲಿನ ಕುಟ್ಟಿಯಾಡಿ ನಗರದಲ್ಲಿ ಬ್ಯಾನರ್ ಒಂದನ್ನು ಹಾಕಿ ‘‘ಎಲ್ಲರಿಗೂ ನನ್ನ ನಗುಮುಖದ ಓಣಂ ಶುಭಾಶಯಗಳು. ಹಬ್ಬಗಳ ಸಂಭ್ರಮದಲ್ಲಿ ಭಾಗವಹಿಸುವುದರಿಂದ ನನ್ನ ಧರ್ಮ ನಾಶವಾಗುತ್ತದೆ ಎಂದಾದರೆ ಅದು ಹಾಗೆಯೇ ಆಗಲಿ’’ ಎಂದು ಬರೆದಿದ್ದಾರೆ.

ಸುಮಾರು 200 ಮಂದಿ ಭಾಗವಹಿಸಿ, ಪಾಯಸ ಸ್ವೀಕರಿಸಿದರು ಎಂದು ಫಾಯಿಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News