×
Ad

ಕಾಂಗ್ರೆಸ್ ಝಾಕಿರ್ ನಾಯ್ಕ್ ರಿಂದ ಪಡೆದ 50ಲಕ್ಷ ರೂ. ಲಂಚ ಆಗಿದೆ : ಬಿಜೆಪಿ

Update: 2016-09-11 12:32 IST

 ಹೊಸದಿಲ್ಲಿ, ಸೆ.11: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಫೌಂಡೇಶನ್, ಝಾಕಿರ್ ನಾಯ್ಕ್ ರಿಂದ ಪಡೆದ 50ಲಕ್ಷ ರೂ. ದೇಣಿಗೆ ದೇಶ ವಿರೋಧಿ ಚಟುವಟಿಕೆಗಳಿಗಾಗಿ ಲಂಚ ಪಡೆದಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ ಎಂದು ವರದಿಯಾಗಿದೆ. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಆರೋಪವನ್ನು ಹೊರಿಸಿದ್ದು, ಝಾಕಿರ್ ನಾಯ್ಕ್ ರ ಇಸ್ಲಾಮಿಕ್ ಫೌಂಡೇಶನ್ 2011ರಲ್ಲಿ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್‌ಗೆ ಹಣ ನೀಡಿತ್ತು ಎಂದು ಗೃಹಖಾತೆಯ ಅಧಿಕಾರಿಗಳನ್ನು ಉದ್ಧರಿಸಿ ರವಿಶಂಕರ್ ಟೀಕಿಸಿದ್ದಾರೆ. ರಾಜೀವ್‌ಗಾಂಧಿ ಫೌಂಡೇಶನ್ ಬಡವರ ಚಿಕಿತ್ಸೆಗೆ ನೆರವು ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದಕ್ಕಾಗಿ ಕೆಲಸಮಾಡುತ್ತಿದೆ.

 ಇದೇವೇಳೆ 2011ರಲ್ಲಿ ಝಾಕಿರ್ ನಾಯ್ಕ್ ರ ಸಂಘಟನೆ ನಿರೀಕ್ಷಣಾ ಪಟ್ಟಿಯಲ್ಲಿ ಇರಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭೀಷೇಕ್ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದಾರೆ. ಫಾರಿನ್ ರೆಗ್ಯುಲೇಶನ್ ಆ್ಯಕ್ಟ್(ಎಫ್‌ಸಿಆರ್‌ಎ) ಪ್ರಕಾರ ತಮ್ಮ ಸಂಘಟನೆಯನ್ನು ನೋಂದಾಯಿಸಲಾಗಿದೆ ಎಂದು ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ವಕ್ತಾರ ಆರಿಫ್ ಮಾಲಿಕ್ ಹೇಳಿದ್ದಾರೆ. ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್‌ಗೆ ಹಣ ನೀಡಲಾಗಿತ್ತು. ಮತ್ತು ಢಾಕಾ ರೆಸ್ಟೋರೆಂಟ್ ದಾಳಿಯ ಬಳಿಕ ಟ್ರಸ್ಟ್ ಜುಲೈಯಲ್ಲಿ ಹಣವನ್ನು ಮರಳಿಸಿದೆ ಎಂದು ಅವರು ತಿಳಿಸಿದ್ದಾರೆ. ಎಫ್‌ಸಿಆರ್‌ಎ ಅಧೀನದಲ್ಲಿ ನೋಂದಾವಣೆಗೊಂಡ ಇಸ್ಲಾಮಿಕ್ ರಿಸರ್ಚ್ ಸೆಂಟರ್‌ಫೌಂಡೇಶನ್‌ನಂತಹ ಸಂಘಟನೆಗಳು ವಿದೇಶದಿಂದ ಲಭಿಸುವ ಹಣವನ್ನು ಎಫ್‌ಸಿಆರ್‌ಎ ಅಂಗೀಕಾರವಿರುವ ಎನ್‌ಜಿಒಗಳಿಗೆ ಹಸ್ತಾಂತರಿಸುವುದು ಅಂಗೀಕೃತವಿಚಾರವಾಗಿದೆ. ರಾಜೀವ್‌ಗಾಂಧಿ ಫೌಂಡೇಶನ್ ಚ್ಯಾರಿಟೇಬಲ್ ಟ್ರಸ್ಟ್ ಎಫ್‌ಸಿಆರ್‌ಎ ಪರವಾನಿಗೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News