×
Ad

ಸೂಪರ್-ಫಾಸ್ಟ್ ಟೆಲ್ಗೊ ರೈಲು ದಿಲ್ಲಿ-ಮುಂಬೈಗೆ ಯಶಸ್ವಿ ಟ್ರಯಲ್

Update: 2016-09-11 13:37 IST

ಮುಂಬೈ, ಸೆ.11: ಸ್ಪೇನ್ ಕಂಪೆನಿಯಿಂದ ನಿರ್ಮಿಸಲ್ಪಟ್ಟಿರುವ ಟೆಲ್ಗೊ ರೈಲು ದಿಲ್ಲಿ ಹಾಗೂ ಮುಂಬೈ ನಡುವೆ ಅಂತಿಮ ಟ್ರಯಲ್‌ನ್ನು ರವಿವಾರ ಯಶಸ್ವಿಯಾಗಿ ಪೂರೈಸಿದೆ. 11.48 ಸಮಯದಲ್ಲಿ ದಿಲ್ಲಿಯಿಂದ ಮುಂಬೈಗೆ ತಲುಪಿದೆ.

 ದಿಲ್ಲಿಯಿಂದ ಶನಿವಾರ ಮಧ್ಯಾಹ್ನ 2:45ಕ್ಕೆ ನಿರ್ಗಮಿಸಿದ ರೈಲು ಬೆಳಗ್ಗೆ 2.34ಕ್ಕೆ ಮುಂಬೈ ತಲುಪಿದೆ. ಭಾರತೀಯ ರೈಲ್ವೇ ದಿಲ್ಲಿ ಹಾಗೂ ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಹೆಚ್ಚು ಕಡಿಮೆಗೊಳಿಸುವ ಗುರಿ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೂಪರ್‌ಫಾಸ್ಟ್ ಟೆಲ್ಗೊ ರೈಲುಗಳ ಟ್ರಯಲ್ಸ್ ನಡೆಸಲಾಗುತ್ತಿದ್ದು, ಪ್ರಯೋಗಗಳು ಯಶಸ್ವಿಯಾದರೆ ಈ ರೈಲು ಶೀಘ್ರವೇ ಹಳಿ ಮೇಲೆ ಓಡಲಿದೆ.

ದಿಲ್ಲಿ ಹಾಗೂ ಮುಂಬೈ ನಡುವಿನ ಅಂತರ ಸುಮಾರು 1,400 ಕಿ.ಮೀ. ಇದೆ. ಪ್ರಸ್ತುತ ರಾಜಧಾನಿ ಎಕ್ಸ್‌ಪ್ರೆಸ್ ಕೇವಲ 16 ಗಂಟೆಯಲ್ಲಿ ಪ್ರಯಾಣಿಸುತ್ತಿದೆ. ಸ್ಪೇನ್ ಕಂಪೆನಿ ಟೆಲ್ಗೊದಿಂದ ಉತ್ಪಾದಿಸಲ್ಪಟ್ಟಿರುವ 9 ಸೂಪರ್ ಲೈಟ್-ವೇಟ್ ಕೋಚ್‌ಗಳನ್ನು ಎಪ್ರಿಲ್‌ನಲ್ಲಿ ಮುಂಬೈಗೆ ಆಮದುಮಾಡಿಕೊಳ್ಳಲಾಗಿತ್ತು.

ಟೆಲ್ಗೊ ರೈಲಿನಲ್ಲಿ 2 ಎಕ್ಸಿಕ್ಯೂಟಿವ್ ಕ್ಲಾಸ್ ಕಾರ್ಸ್‌, 4 ಚೇರ್‌ಕಾರ್ಸ್‌, ಕಫೆಟೆರಿಯಾ, ಪವರ್ ಕಾರ್ ಹಾಗೂ ಟೈಲ್-ಎಂಡ್ ಕಾರ್ ಇವೆ. ಭಾರತದ ರೈಲುಗಳ ಬೋಗಿಗಳಿಗಿಂತ ತುಂಬಾ ಹಗುರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News