ಪ್ರಧಾನಿ ಸೋದರನ ಪುತ್ರಿಯ ನಿಧನ
ಪ್ರಹ್ಲಾದ್ ಮೋದಿಯ ಮಗಳು ನಿಕುಂಜ್ ನಗರದ ಆಸ್ಪತ್ರೆಯಲ್ಲಿ ಹೃದಯದ ಸಮಸ್ಯೆಯಿಂದ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಸಹೋದರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆಮಾಡಿ ಅಂತ್ಯಕ್ರಿಯೆಯ ಎಲ್ಲಾ ಅಗತ್ಯ ಧಾರ್ಮಿಕ ವಿಧಿಗಳು ವ್ಯವಸ್ಥಿತವಾಗಿ ನಡೆಯುತ್ತಿವೆಯೇ ಎಂದು ವಿಚಾರಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಕಿರಿಯ ಸಹೋದರ ಪ್ರಹ್ಲಾದ್ ಮೋದಿಯ ಮಗಳು ಧೀರ್ಘ ಕಾಲದ ಹೃದಯ ಸಮಸ್ಯೆಯಿಂದ ಮಂಗಳವಾರ ಸಾವಿಗೀಡಾಗಿದ್ದರು. ನಂತರ ಅದೇ ದಿನ ಆಕೆಯ ಅಂತ್ಯಸಂಸ್ಕಾರ ನಡೆದಿದೆ. ಕಳೆದ 8-9 ವರ್ಷಗಳಿಂದ ನಿಕುಂಜ್‌ಬೆನ್ ಹೃದಯ ರೋಗದಿಂದ ಬಳಲುತ್ತಿದ್ದು, ಅಹಮದಾಬಾದಿನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ಬಗ್ಗೆ ತಿಳಿಯುತ್ತಲೇ ಚೀನಾದ ಜಿ20 ಶೃಂಗ ಸಮ್ಮೇಳನದಿಂದ ವಾಪಾಸಾದ ಮೋದಿ ತಮ್ಮ ಸಹೋದರನಿಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದರು.
"ನರೇಂದ್ರ ಬಾಯಿ ಚೀನಾದಿಂದ ಬಂದ ಕೂಡಲೇ ಕರೆ ಮಾಡಿ ವಿಚಾರಿಸಿಕೊಂಡಿದ್ದಾರೆ. ಅಂತ್ಯಕ್ರಿಯೆಯ ನಂತರ ಮತ್ತೊಮ್ಮೆ ಕರೆ ಮಾಡಿದ್ದಾರೆ" ಎಂದು ಪ್ರಹ್ಲಾದ್ ಮೋದಿ ಹೇಳಿದ್ದಾರೆ.
ಬೋಪಾಲ್‌ನ ಸಹ್ಜನಂದ್ ಬಂಗಲೆಯಲ್ಲಿ ನೆಲೆಸಿದ್ದ ನಿಕುಂಜ್‌ಬೆನ್ ಮತ್ತು ಜಗದೀಶ್ ಕುಮಾರ್ ದಂಪತಿಗೆ 12 ವರ್ಷದ ಮಗ ರಾಹುಲ್ ಹಾಗೂ 8 ವರ್ಷದ ಮಗಳಿದ್ದಾರೆ. ನಿಕುಂಜ್‌ಬೆನ್‌ರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಆಕೆಯ ಪತಿ ಖಾಸಗಿ ಸಂಸ್ಥೆಯಲ್ಲಿ ಕಂಪ್ಯೂಟರ್ ರಿಪೇರಿ ಮಾಡುತ್ತಾರೆ. ಟ್ಯೂಷನ್ ಮತ್ತು ಹೊಲಿಗೆ ಮೂಲಕ ನಿಕುಂಜ್‌ಬೆನ್ ಕುಟುಂಬಕ್ಕೆ ನೆರವಾಗುತ್ತಿದ್ದರು. ಜಗದೀಶ್ ಮೋದಿ ತಮ್ಮ ಪತ್ನಿಯ ಬಗ್ಗೆ ಮಾತನಾಡುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿಕೆ ನೀಡಲು ನಿರಾಕರಿಸಿದರು.
ಕೃಪೆ: epaperbeta.timesofindia.com