ತಿಥಿಗೆ ಅಂತಾರಾಷ್ಟ್ರೀಯ ಮನ್ನಣೆ

Update: 2016-09-11 10:27 GMT

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ‘ತಿಥಿ’ಗೆ ಈಗ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದೆ. ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪ್ರಪ್ರಥಮ ಬ್ರಿಕ್ಸ್ ಚಿತ್ರೋತ್ಸವದಲ್ಲಿ ‘ತಿಥಿ’ ಶ್ರೇಷ್ಠ ಚಿತ್ರ ಪ್ರಶಸ್ತಿ ದೊರೆತಿದೆ. ಬಾಕ್ಸ್‌ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ತಿಥಿ’ ಕ್ಲಾಸ್ ಪ್ರೇಕ್ಷಕರಿಗೆ ಮಾತ್ರವಲ್ಲ ಮಾಸ್ ಪ್ರೇಕ್ಷಕರನ್ನೂ ಮೋಡಿ ಮಾಡಿದೆ. ‘ಅತಿಥಿ’ ಈ ಮೊದಲು ಲೊಕಾರ್ನೊ, ಶಾಂಘಾ ಮತ್ತಿತರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶಿತಗೊಂಡು ಚಿತ್ರಪ್ರೇಮಿಗಳ ಮನಸೂರೆಗೊಂಡಿತ್ತು.

ರಾಷ್ಟ್ರಮಟ್ಟದಲ್ಲಿ ಈ ಸಾಲಿನ ಶ್ರೇಷ್ಠ ಪ್ರಾದೇಶಿಕ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಈ ಚಿತ್ರವು ಕಳೆದ ಒಂದು ವರ್ಷದ ಅವಧಿಯಲ್ಲಿ 10ಕ್ಕೂ ಅಧಿಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದೀಗ ಬ್ರಿಕ್ಸ್ ಚಲನಚಿತ್ರೋತ್ಸವವನ್ನು ಗಳಿಸುವ ಮೂಲಕ ‘ತಿಥಿ’ ತನ್ನ ಕೀರ್ತಿಯ ಕಿರೀಟಕ್ಕೆ ಇನ್ನೊಂದು ತುರಾಯಿಯನ್ನು ಸೇರಿಸಿದೆ.

ಉದಯೋನ್ಮುಖ ನಿರ್ದೇಶಕ ರಾಮಿ ರೆಡ್ಡಿ ನಿರ್ದೇಶನದ ‘ತಿಥಿ’ ಚಿತ್ರವು ಕುಟುಂಬದ ಮುಖ್ಯಸ್ಥನಾದ ಶತಾಯುಷಿ ಅಜ್ಜನೊಬ್ಬನ ಉತ್ತರ ಕ್ರಿಯೆ ಹಾಗೂ ಆ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳ ಕುರಿತಾದ ಕಥಾವಸ್ತುವನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News