ಸ್ವಾತಂತ್ರ್ಯ ಹೋರಾಟ ಸಂದರ್ಭದ ವಂಚಕರೇ ಈಗ ದೇಶಪ್ರೇಮಿಗಳಂತೆ ನಟಿಸುತ್ತಿದ್ದಾರೆ: ಪಿಣರಾಯಿ ವಿಜಯನ್
ತಿರವನಂತಪುರ,ಸೆಪ್ಟಂಬರ್ 11: ಸ್ವಾತಂತ್ರ್ಯಸಮರ ಕಾಲದ ವಂಚಕರು, ದ್ರೋಹಿಗಳಲ್ಲಿ ಕೆಲವರು ಈಗ ದೇಶಪ್ರೇಮಿಗಳಂತೆ ನಟಿಸುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ ಎಂದು ವರದಿಯಾಗಿದೆ. ಯಾರು ದೇಶಪ್ರೇಮಿಗಳೆಂಬ ಪ್ರಶ್ನೆಯನ್ನು ಇವರೇ ಎತ್ತುತ್ತಿದ್ದಾರೆ. ದೇಶಪ್ರೇಮವನ್ನು ಇವರೇ ದುರ್ವಾಖ್ಯಾನ ನಡೆಸುತ್ತಿದ್ದಾರೆ. ಇವರಲ್ಲಿರುವುದು ಫ್ಯಾಶಿಸ್ಟ್ ಮನಸ್ಸು ಮತ್ತು ಸಿದ್ಧಾಂತವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಅವರು ವಕ್ಕಂ ಖಾದರ್ ಹುತಾತ್ಮ ದಿನದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಊರಿನಲ್ಲಾದ ಸಾಮಾಜಿಕ ಪರಿವರ್ತನೆಗಳ ಕುರಿತು ಪ್ರಜ್ಞಾ ಪೂರ್ವಕವಾಗಿ ಕೆಲವು ಕೇಂದ್ರಗಳು ಮೌನತಾಳಿವೆ. ವಕ್ಕಂ ಖಾದರ್ ರಂತಹ ಸ್ವಾತಂತ್ರ್ಯ ಧೀರರಾದ ಸ್ವಾತಂತ್ರ್ಯ ಸಮರ ಸೇನಾನಿಗಳಿಗೆ ಬ್ರಿಟಿಷ್ ಸಾಮ್ರಾಜ್ಯದ ನೇಣಿನ ಕುಣಿಕೆಯ ಮುಂದೆ ದೃಢವಾಗಿ ನಿಲ್ಲಲು ಸಾಧ್ಯವಾಗಿದೆ. ಆದರೆ ಸ್ವಯಂ ಘೋಷಿತ ದೇಶಪ್ರೇಮಿಗಳಾಗಿ ನಟನೆ ಮಾಡುವವರಲ್ಲಿ ಕೆಲವರು ಕ್ಷಮೆ ಕೇಳಿ ಜೀವ ಉಳಿಸಿಕೊಂಡವರು ಆಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಜಾತೀಯ ಧ್ರವೀಕರಣ ಬಲಪಡಿಸುವ ಕ್ರಮಗಳು ಜರಗುತ್ತಿವೆ. ಜಾತೀಯ, ಧಾರ್ಮಿಕ ಭಿನ್ನಮತಗಳ ವಿರುದ್ಧ ವಕ್ಕಂ ಖಾದರ್ ಅವರ ಧೀರ ತ್ಯಾಗಗಳು ಒಂದು ಶಕ್ತಿಯನ್ನು ತಂದುಕೊಟ್ಟಿದೆ.
ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಹಕ್ಕುಗಳೆಲ್ಲವೂ ಒಂದು ದಿವಸದಲ್ಲಿ ಸಿಕ್ಕಿದ್ದೇನೂ ಅಲ್ಲ. ಸ್ವಾತಂತ್ರ್ಯ ಮತ್ತು ನವೋತ್ಥಾನದ ದಾರಿ ಹೂಗಳ ಹಾಸು ಆಗಿರಲಿಲ್ಲ. ಬಹುದೊಡ್ಡ ವಿರೋಧ ಎದುರಿಸಿ, ಜೀವತ್ಯಾಗ ಸಹಿಸಿ ಇಂದು ನಾವು ಈ ನೆಲೆಗೆ ಬಂದಿದ್ದೇವೆ. ಈ ವಿಷಯಗಳನ್ನು ಮರೆಸುವಂತಹ ಪ್ರಶ್ನೆಗಳು ಇಂದು ಕೆಲವು ಕೇಂದ್ರಗಳಿಂದ ಕೇಳಿ ಬರುತ್ತಿವೆ. ಹೊಸತಲೆಮಾರು ಕಡ್ಡಾಯವಾಗಿ ಅರಿತಿರಬೇಕಾದ ಇತಿಹಾಸ ಪುರುಷ ವಕ್ಕಂಖಾದರ್ ಆಗಿದ್ದಾರೆ. ಭಗತ್‌ಸಿಂಗ್‌ರ ಜೀವನದಲ್ಲಿ ಸಂಭಂವಿಸಿದ್ದಕ್ಕೆ ಸಮಾನವಾಗಿದ್ದು ಐಎನ್‌ಎ ಹೀರೋ ವಕ್ಕಂ ಖಾದರ್‌ರ ಜೀವನದಲ್ಲಿಯೂ ಸಂಭವಿಸಿದೆ. ನಮ್ಮ ಹೀರೋ ಸಂಕಲ್ಪಿಗಳಲ್ಲಿ ಕಾಲ ಯಾವುದಾದರೂ ತೊಂದರೆ ತಂದೊಡ್ಡಿದೆಯೇ ಎಂದು ಪರಿಶೀಲಿಸಬೇಕಾಗಿದೆ.
ವಕ್ಕಂ ಖಾದರ್ ಸ್ಮಾರಕ ನಿರ್ಮಿಸಲು ಸರಕಾರದಿಂದ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.ಎಂಎಂ ಹಸನ್ ಅಧ್ಯಕ್ಷತೆಯನ್ನು ವಹಿಸಿದರು. ಆನತ್ತಲಟ್ಟ ಆನಂದನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೈಲಜಾ ಬೇಗಂ, ಎಂಎಸ್ ಫೈಸಲ್‌ಖಾನ್, ಇಎಂ ನಜೀಬ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂಎಂ ಇಕ್ಬಾಲ್ ಸ್ವಾಗತಿಸಿದರು.