×
Ad

ಚೌಕಕ್ಕೆ ನಾಲ್ಕು ಹಿರೋಯಿನ್‌ಗಳು

Update: 2016-09-11 16:02 IST

ದ್ವಾರಕೀಶ್ ನಿರ್ಮಾಣದ 50ನೆ ಚಿತ್ರ ಚೌಕ ಹೆಚ್ಚು ಕಮ್ಮಿ ಬಿಡುಗಡೆಗೆ ಸಿದ್ಧವಾಗಿದೆ. ವಿಶೇಷವೆಂದರೆ, ಈ ಚಿತ್ರದ ಕುರಿತಾದ ವಿವರಗಳನ್ನು ನಿರ್ಮಾಪಕರು ಈವರೆಗೂ ಸಸ್ಪೆನ್ಸ್‌ನಲ್ಲಿರಿಸಿದ್ದರು. ಐಂದ್ರಿತಾ ರಾಯ್ ಹಾಗೂ ದೀಪಾ ಸನ್ನಿಧಿ ಚಿತ್ರದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾ ರೆಂದು ಹೇಳಲಾಗುತ್ತಿತ್ತು. ಇದೀಗ ಈ ಚಿತ್ರದಲ್ಲಿ ಇನ್ನೂ ಇಬ್ಬರು ನಾಯಕಿಯರಿರುವ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಐಂದ್ರಿತಾ ರಾಯ್ ಹಾಗೂ ದೀಪಾಸನ್ನಿಧಿ ಹೊರತಾಗಿ, ಬಹುಭಾಷಾ ತಾರೆಯರಾದ ಪ್ರಿಯಾಮಣಿ ಮತ್ತು ಭಾವನಾ ಕೂಡಾ ನಾಯಕಿಯರಾಗಿ ನಟಿಸಿದ್ದಾರೆ. ಈ ಮೊದಲು ಪ್ರಿಯಾಮಣಿ ಹಾಗೂ ಭಾವನಾ, ಕಿಚ್ಚ ಸುದೀಪ್ ಅಭಿನಯದ ‘ವಿಷ್ಣುವರ್ಧನ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಚಿತ್ರವನ್ನೂ ದ್ವಾರಕೀಶ್ ಅವರೇ ನಿರ್ಮಿಸಿದ್ದರು. ಇದೀಗ ಮತ್ತೊಮ್ಮೆ ದ್ವಾರಕೀಶ್ ಚಿತ್ರದಲ್ಲಿ ಈ ಇಬ್ಬರು ಜನಪ್ರಿಯ ನಟಿಯರ ಸಂಗಮವಾಗಿದೆ.

 ಮಲ್ಟಿಸ್ಟಾರ್ ಚಿತ್ರವಾದ ‘ಚೌಕ’ದಲ್ಲಿ ಪ್ರೇಮ್, ಪ್ರಜ್ವಲ್, ದಿಗಂತ್ ಹಾಗೂ ವಿಜಯ್ ರಾಘವೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ- ನಿರ್ದೇಶಕ ನಂದಕಿಶೋರ್‌ರ ಸಹೋದರ ತರುಣ್ ಸುಧೀರ್, ಈ ಚಿತ್ರದ ಮೂಲಕ ಡೈರೆಕ್ಟರ್ ಪಟ್ಟವನ್ನು ಅಲಂಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News