ಬಿಜೆಪಿ ಕಚೇರಿ ದಾಳಿ ಪ್ರಕರಣದ ತನಿಖೆ : ಬಿಜೆಪಿ ಸಂಸದರ ತಂಡದಲ್ಲಿ ನಳಿನ್, ಹೆಗಡೆ
Update: 2016-09-11 16:25 IST
ಹೊಸದಿಲ್ಲಿ, ಸೆಪ್ಟಂಬರ್11: ಕೇರಳದಲ್ಲಿ ಬಿಜೆಪಿಯ ರಾಜ್ಯ ಕಚೇರಿ ಮೇಲೆ ನಡೆದ ಆಕ್ರಮಣವೂ ಸೇರಿ, ಕೇರಳದಾದ್ಯಂತ ಬಿಜೆಪಿಗರ ವಿರುದ್ಧ ನಡೆದಿರುವ ದಾಳಿಗಳ ತನಿಖೆ ನಡೆಸಿ ವರದಿಮಾಡಲಿಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಐದು ಮಂದಿಯ ಕೇಂದ್ರ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ಪ್ರಧಾನಕಾರ್ಯದರ್ಶಿ ಭೂಪೇಂದ್ರಯಾದವ್ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಸಂಸದರಾದ ಮೀನಾಕ್ಷಿ ಲೇಖಿ, ಅನಂತ ಕುಮಾರ್ ಹೆಗಡೆ, ನಳಿನ್‌ಕುಮಾರ್ ಕಟೀಲ್ ಹಾಗೂ ಕೇರಳದ ಉಸ್ತುವಾರಿಯಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜ ಕೂಡಾ ಇದ್ದಾರೆ ಸಮಿತಿ ಸದಸ್ಯರು ಶೀಘ್ರವೇ ಕೇರಳಕ್ಕೆ ಭೇಟಿ ನೀಡಲಿದ್ದು, ಅಮಿತ್‌ಶಾಗೆ ತನಿಖಾ ವರದಿ ಸಮರ್ಪಿಸಲಿದ್ದಾರೆ. ಸಿಪಿಐಎಂ ಅಧಿಕಾರಕ್ಕೇರಿದ ಬಳಿಕ ತಮ್ಮನ್ನು ಬೇಟೆಯಾಡುತ್ತಿದೆ ಎಂದು ಬಿಜೆಪಿಯು ಆರೋಪಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರ ಸಮಿತಿ ಕೇರಳಕ್ಕೆ ಭೇಟಿ ನೀಡುತ್ತಿದೆ ಎಂದು ವರದಿ ತಿಳಿಸಿದೆ.