ದ.ಕಾಶ್ಮೀರದಲ್ಲಿ ಮತ್ತೆ ಘರ್ಷಣೆ ಹಲವಾರು ಜನರಿಗೆ ಗಾಯ
Update: 2016-09-11 19:18 IST
ಶ್ರೀನಗರ,ಸೆ.11: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಹೊಸದಾಗಿ ಘರ್ಷಣೆ ಸಂಭವಿಸಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.
ಭದ್ರತಾ ಪಡೆಗಳು ರಾತ್ರಿ ವೇಳೆ ದಾಳಿಗಳನ್ನು ನಡೆಸುವುದನ್ನು ವಿರೋಧಿಸಿ ಕರೀಮಾಬಾದ ಮತ್ತು ಆಸುಪಾಸಿನ ಪ್ರದೇಶಗಳ ಸಾವಿರಾರು ನಿವಾಸಿಗಳು ಬೆಳಿಗ್ಗೆ ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದರು. ಪ್ರತಿಭಟನಾಕಾರರು ಕಲ್ಲುಗಳನ್ನು ತೂರತೊಡಗಿದಾಗ ಪ್ರತಿದಾಳಿಗಿಳಿದ ಭದ್ರತಾ ಪಡೆ ಸಿಬ್ಬಂದಿಗಳು ಅಶ್ರುವಾಯು ಪ್ರಯೋಗಿಸಿದರಲ್ಲದೆ, ಪೆಲೆಟ್ ಗನ್‌ಗಳನ್ನೂ ಬಳಸಿದರು.
20ಕ್ಕೂ ಅಧಿಕ ಗಾಯಾಳುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.