×
Ad

ಉತ್ತರಪ್ರದೇಶ ಸರಕಾರ ಜಾಹೀರಾತಿಗೆ ಖರ್ಚು ಮಾಡಿದ್ದು 460ಕೋಟಿ ರೂ.!

Update: 2016-09-13 16:20 IST

ಲಕ್ನೊ, ಸೆಪ್ಟಂಬರ್ 13: ಬಡವರ ಪಕ್ಷಪಾತಿ ಎಂದು ತನ್ನನ್ನು ವರ್ಣಿಸುವ ಉತ್ತರಪ್ರದೇಶದ ಅಖಿಲೇಶ್ ಯಾದವ್ ಸರಕಾರ ಜಾಹೀರಾತುಗಳಿಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಬರೋಬ್ಬರಿ 460 ಕೋಟಿರೂ. ಖರ್ಚು ಮಾಡಿದೆ ಎಂದು ವರದಿಯಾಗಿದೆ. ವಿಶೇಷವೇನೆಂದರೆ ಚುನಾವಣೆಯ ಸಮಯ ಹತ್ತಿರವಾಗುತ್ತಿರುವಂತೆ ಜಾಹೀರಾತು ಖರ್ಚು ಮಾಡುವುದರಲ್ಲಿ ಈ ಸರಕಾರ ಬಹಳ ಧಾರಾಳಿಯಾಗಿಬಿಟ್ಟಿದೆ.

2014-15ರಲ್ಲಿ ಜಾಹೀರಾತಿಗಾಗಿ ಅಖಿಲೇಶ್ ಸರಕಾರ ಬಳಸಿದ ಹಣದಷ್ಟು ಈವರ್ಷ ಮೊದಲ ನಾಲ್ಕು ತಿಂಗಳಲ್ಲಿಯೇ ಖರ್ಚುಮಾಡಿಬಿಟ್ಟಿದೆ. ಸರಕಾರಿ ಹಣವನ್ನು ಖರ್ಚುಮಾಡುವಲ್ಲಿ ಹಿಂದಿನ ಮಾಯಾವತಿ ಸರಕಾರಕ್ಕಿಂತ ಅಖಿಲೇಶ್ ಯಾದವ್ ಕೂಡಾ ಕಡಿಮೇಯೇನಲ್ಲ ಎಂದು ಈ ವಿದ್ಯಮಾನಗಳು ತಿಳಿಸುತ್ತಿವೆ. ಮುಂದಿನ ವರ್ಷ ಆರಂಭದಲ್ಲಿಯೇ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣಾ ಸಮೀಕ್ಷೆ ಪ್ರಕಾರ ಅಖಿಲೇಶ್ ಯಾದವ್ ಸರಕಾರಕ್ಕೆ ಅದಕ್ಕೂ ಮೊದಲಿನ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಯಾದವ್ ಸರಕಾರದಷ್ಟು ವಿರೋಧವಿಲ್ಲ ಎನ್ನಲಾಗಿದೆ. ಇದು ಸಮಾಜವಾದಿ ಪಾರ್ಟಿಯನ್ನು ಮತ್ತೊಮ್ಮೆ ಅಧಿಕಾರದತ್ತ ತಂದು ನಿಲ್ಲಿಸುವ ಸಾಧ್ಯತೆಯೆಂದು ಲೆಕ್ಕಮಾಡಲಾಗುತ್ತಿದೆ.

ಆದ್ದರಿಂದ ಜನರೆಡೆ ಸರಕಾರದ ವರ್ಚಸ್ಸು ಉತ್ತಮವಾಗಿರುವುದು ಅಗತ್ಯವಾಗಿದೆ. ಆದ್ದರಿಂದ ಸರಕಾರ ಪತ್ರಿಕೆ, ಟಿವಿ ಚ್ಯಾನೆಲ್‌ಗಳಲ್ಲಿ ಭರಪೂರ ಜಾಹೀರಾತು ನೀಡುತ್ತಿದೆ. ಹೀಗಾಗಿ ಕಳೆದ ಎರಡುವರ್ಷ ನಾಲ್ಕು ತಿಂಗಳಲ್ಲಿ 460 ಕೋಟಿ ರೂಪಾಯಿ ಬರೇ ಜಾಹೀರಾತಿಗಾಗಿ ಅಖಿಲೇಶ್ ಸರಕಾರ ಖರ್ಚುಮಾಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News