×
Ad

ಪ್ಯಾರಾಅಥ್ಲೀಟ್‌ಗಳ ಬಗ್ಗೆ ಯಾಕಿಷ್ಟು ಅಸಡ್ಡೆ?

Update: 2016-09-13 23:23 IST

2014ರಲ್ಲಿ ನಡೆದ ಏಶ್ಯ ಪ್ಯಾರಾ-ಸೈಕ್ಲಿಂಗ್ ಚಾಂಪಿಯನ್‌ಶಿಪ್ ಸ್ಪರ್ಧಾಕೂಟದಲ್ಲಿ ಎರಡು ಬೆಳ್ಳಿಪದಕಗಳನ್ನು ಗೆದ್ದ ಬಳಿಕ ನಾನು ಸಂತಸದ ಕಡಲಲ್ಲಿ ತೇಲಾಡುತ್ತಿದ್ದೆ. ಆದರೆ ಈ ಸಂತಸ ಬಹುಕಾಲ ಉಳಿಯಲಿಲ್ಲ. ಪ್ಯಾರಾಸೈಕ್ಲಿಂಗನ್ನು ಪ್ಯಾರಾಲಿಂಪಿಕ್ಸ್ ಕ್ರೀಡೆಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಕೋರಲು ನಾನು ಪ್ಯಾರಾಲಿಂಪಿಕ್ಸ್ ಸಮಿತಿ ಯನ್ನು ಭೇಟಿಯಾಗಿದ್ದೆ. ಆದರೆ ಯಾವುದೇ ಮನವರಿಕೆಯಾಗುವಂತಹ ಉತ್ತರವನ್ನು ನೀಡದ ಅವರು ನನ್ನ ಮನವಿಯನ್ನು ತಳ್ಳಿಹಾಕಿ ದರು.

   ದಿಲ್ಲಿಗೆ ಹಲವಾರು ಬಾರಿ ತೆರಳುವುದು ಹಾಗೂ ಅಲ್ಲಿ ಗಂಟೆ ಗಟ್ಟಲೆ ಕಾಯುವುದು ನನ್ನ ಪಾಲಿಗೆ ಬಹಳ ಕಠಿಣ ವಾದ ಕೆಲಸವಾಗಿತ್ತು ಆದಾಗ್ಯೂ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಎತ್ತಿಹಿಡಿಯುವ ಸುಸಂದರ್ಭಕ್ಕಾಗಿ ಕಾಯುತ್ತಿದ್ದ ನನಗೆ ಇದ್ಯಾವುದರ ಚಿಂತೆಯಿರಲಿಲ್ಲ. ದುರದೃಷ್ಟವಶಾತ್ ನನ್ನ ಉದ್ದೇಶವನ್ನು ಸಾಸಲಾಗಲಿಲ್ಲ ಹಾಗೂ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯು ಪ್ಯಾರಾಸೈಕ್ಲಿಂಗ್‌ಗೆ ಕ್ರೀಡಾ ಮಾನ್ಯತೆ ನೀಡುವುದಿಲ್ಲವೆಂಬುದನ್ನು ತಿಳಿದು ನನಗೆ ತುಂಬಾ ನೋವಾಯಿತು. ಆನಂತರ ಈ ವಿಷಯದಲ್ಲಿ ನಾನೊಬ್ಬನೇ ಏಕಾಂಗಿಯಲ್ಲ. ವಿವಿಧ ಕ್ರೀಡೆಗಳ ಮೂಲಕ ಭಾರತವನ್ನು ಪ್ರತಿನಿಸುವ ಅವಕಾಶಕ್ಕಾಗಿ ಇತರ ಪ್ಯಾರಾಅಥ್ಲೀಟ್‌ಗಳು ಕೂಡಾ ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆಂಬುದು ನನ್ನ ಅರಿವಿಗೆ ಬಂದಿತು. ಅಂಗವೈಕಲ್ಯದ ಹೊರತಾಗಿಯೂ ದೇಶಕ್ಕೆ ಕೊಡುಗೆ ನೀಡಲು ಹಾತೊರೆಯುತ್ತಿರುವ ಭಿನ್ನಸಾಮರ್ಥ್ಯದವರಾದ ನಾವು ಆಶಾವಾದವನ್ನು ಕೈಬಿಡಬಾರದೆಂಬ ದೃಢಸಂಕಲ್ಪವನ್ನು ಮಾಡಿಕೊಂಡೆ.

ನಗದು ಬಹುಮಾನ ವಂಚಿತ ಪ್ಯಾರಾ ಅಥ್ಲೀಟ್‌ಗಳು

 ಯೂನಿಯನ್ ಸೈಕ್ಲಿಸ್ಟ್ ಇಂಟರ್‌ನ್ಯಾಶನಲ್ ಸಂಸ್ಥೆಯು ಆಯೋಜಿಸುವ ಪ್ಯಾರಾಸೈಕ್ಲಿಂಗ್ ಟ್ರಾಕ್ ವಿಶ್ವಚಾಂಪಿಯನ್‌ಶಿಪ್ ಕೂಟ, ವೆರೋಲಾ ಪ್ಯಾರಾಸೈಕ್ಲಿಂಗ್ ಕಪ್, ಪ್ಯಾರಾ ಸೈಕ್ಲಿಂಗ್ ಯುರೋಪಿಯನ್ ಕಪ್‌ನಂತಹ ವಿವಿಧ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ನಿಯ ಕೊರತೆಯ ಕಾರಣ, ಪ್ಯಾರಾ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಂತಹ ಹಲವು ನಿದರ್ಶನಗಳು ನಮ್ಮ ಮುಂದಿವೆ. ಒಂದು ವೇಳೆ ಕನಿಷ್ಠ ಪಕ್ಷ ಈ ಪ್ಯಾರಾಸೈಕ್ಲಿಸ್ಟ್‌ಗಳು ಈ ಹಿಂದೆ ಗೆದ್ದ ಪದಕಗಳ ಜೊತೆಗೆ ನಗದು ಹಣವನ್ನು ನೀಡಿದ್ದರೂ ಕೂಡಾ ಅವರು ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿತ್ತೇನೋ?.
ಕೆಲವು ಪ್ಯಾರಾಅಥ್ಲೀಟ್‌ಗಳಿಗೆ ಈತನಕವೂ ನಗದು ಬಹುಮಾನ ದೊರೆತಿಲ್ಲ. 2008ರ ಏಶ್ಯಕಪ್‌ನಲ್ಲಿ ಹಾಗೂ 2012ರಲ್ಲಿ ಚಾಂಪಿಯನ್‌ಶಿಪ್ ಕೂಟದಲ್ಲಿ ಕಂಚಿನ ಪದಕಗಳನ್ನು ಹಾಗೂ 2015ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಆನಂದ್‌ಕುಮಾರ್ ಅವರಲ್ಲೊಬ್ಬರು. 2013 ಹಾಗೂ 2015ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮಾರ್ಕ್ ಧರ್ಮಾಯ್ ಇನ್ನೊಬ್ಬರು. ಹೀಗೆ ನಗದು ಬಹುಮಾನ ವಂಚಿತ ಚಾಂಪಿಯನ್‌ಗಳ ಪಟ್ಟಿಯೇ ದೊಡ್ಡದಿದೆ.

ಪದಕ ಗೆದ್ದುದಕ್ಕಾಗಿ ಒಲಿಂಪಿಕ್ಸ್ ಪದಕ ವಿಜೇತರೊಬ್ಬರಿಗೆ ಪ್ರೋತ್ಸಾಹವಾಗಿ 20 ಕೋಟಿ ರೂ. ಬಹುಮಾನ ನೀಡುವ ಈ ದೇಶದಲ್ಲಿ ಅಗಾಧವಾದ ಪ್ರತಿಭೆಯಿರುವ ಪ್ಯಾರಾಅಥ್ಲೀಟ್‌ಗಳಿಗಾಗಿ ಉತ್ತಮ ಮೂಲಸೌಕರ್ಯ ಮತ್ತಿತರ ನೆರವನ್ನು ಸರಕಾರ ಒದಗಿಸಿದಲ್ಲಿ ಅದಕ್ಕೆ ನಾವು ತುಂಬಾ ಅಭಾರಿಗಳಾಗುತ್ತೇವೆ. ಇದರಿಂದಾಗಿ ಅವರಿಗೆ ಕೃತಕ ಅವಯವ ಅಥವಾ ಗಾಲಿಕುರ್ಚಿಯಂತಹ ಇತ್ಯಾದಿ ಆವಶ್ಯಕತೆಗಳಿಗೆ ತಗಲುವ ಖರ್ಚನ್ನು ಪೂರೈಸಲು ಸಾಧ್ಯವಾಗುವುದು.

  ಈ ವರ್ಷದ ಜುಲೈನಲ್ಲಿ ನಡೆದ ಅಂತಾರಾಷ್ಟ್ರೀಯ ಐರಿಶ್ ಪ್ಯಾರಾಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿ ಕೈಯಲ್ಲಿ ಪದಕಗಳೊಂದಿಗೆ ಹಾಗೂ ಕಣ್ಣುಗಳಲ್ಲಿ ಆಶ್ರು ತುಂಬಿಕೊಂಡು ತವರಿಗೆ ಆಗಮಿಸಿದ ನಮ್ಮ ಪ್ರತಿಷ್ಠಾನದ ವಿಸ್ತೃತ ಕುಟುಂಬದ ಪ್ಯಾರಾಅಥ್ಲೀಟ್‌ಗಳನ್ನು ಕಂಡಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ತಮ್ಮ ಯಶಸ್ಸಿಗೆ ಮಾನ್ಯತೆ ದೊರೆಯುತ್ತಿಲ್ಲ ಹಾಗೂ ತಮ್ಮ ಸಾಧನೆಯನ್ನು ಮುಂದುವರಿಸಲು ಅವಕಾಶಗಳಿಲ್ಲ ಎಂಬ ವೇದನೆ ಅವರ ಹೃದಯವನ್ನು ಕಾಡುತ್ತಿದೆ. ಯಾಕೆಂದರೆ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ)ಯ ವ್ಯಾಪ್ತಿಗೆ ಬರುವ ಕ್ರೀಡೆಗಳ ಪಟ್ಟಿಯಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಕೂಡಾ ಸ್ಥಾನವನ್ನು ಪಡೆದಿಲ್ಲ. ಭಾರತೀಯ ಕ್ರೀಡಾ ಪ್ರಾಕಾರದ ಸದಸ್ಯರ ಮೇಲೆ ಪ್ರಭಾವ ಬೀರಲು ಸಲರಾದವರು ಮಾತ್ರವೇ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿದ್ದಾರೆಂದು ಹಲವು ಪ್ಯಾರಾ ಅಥ್ಲೀಟ್‌ಗಳು ದೂರುತ್ತಿದ್ದಾರೆ.

   ನೂತನವಾಗಿ ರಚನೆಯಾಗಿರುವ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯು, ಪ್ಯಾರಾ ಅಥ್ಲೀಟ್‌ಗಳ ಸ್ಥಿತಿಗತಿಗಳನ್ನು ಸುಧಾರಿಸಲು ಶ್ರಮಿಸಬೇಕಾಗಿದೆ. ಪ್ಯಾರಾಅಥ್ಲೀಟ್ ಹಾಗೂ ಭಿನ್ನಸಾಮರ್ಥ್ಯ ವಲಯವನ್ನು ಚೆನ್ನಾಗಿ ತಿಳಿದುಕೊಂಡಿರುವ ಹಾಗೂ ಆ ನಿಟ್ಟಿನಲ್ಲಿ ಶ್ರಮಿಸಲು ಉತ್ಕಟವಾದ ಹಂಬಲಹೊಂದಿರುವ ಶುದ್ಧ ಚಾರಿತ್ರದ ಓರ್ವ ಅಕಾರಿಯನ್ನು ಜೊತೆಗೂಡಿಸುವ ಅಗತ್ಯವಿದೆ.
ತಮ್ಮ ಭಿನ್ನಸಾಮರ್ಥ್ಯಗಳ ಹೊರತಾಗಿಯೂ, ಏಶ್ಯ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪ್ಯಾರಾ ಅಥ್ಲೀಟ್‌ಗಳು ಈಗಾಗಲೇ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಒಂದು ವೇಳೆ ಅವರಿಗೆ ಉತ್ತಮ ಮೂಲ ಸೌಕರ್ಯ, ಆರ್ಥಿಕ ನೆರವು ಹಾಗೂ ನಿಷ್ಪಕ್ಷಪಾತ ಬೆಂಬಲ ನೀಡಿದಲ್ಲಿ ಅವರು ಅದ್ಭುತವನ್ನೇ ಸೃಷ್ಟಿಸಬಲ್ಲರು.

 ಗಾಲಿಕುರ್ಚಿ ಲಾನ್ ಟೆನಿಸ್, ಗಾಲಿಕುರ್ಚಿಯ ಕತ್ತಿವರಸೆ, ಪ್ಯಾರಾಸೈಕ್ಲಿಂಗ್, ಪ್ಯಾರಾ ಬ್ಯಾಡ್ಮಿಂಟನ್ ಮತ್ತಿತರ ಪ್ಯಾರಾಕ್ರೀಡೆಗಳನ್ನು ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯು ಪ್ರತಿನಿಸುತ್ತಿಲ್ಲ. ಈ ಕ್ರೀಡೆಗಳ ಸೇರ್ಪಡೆಯು ಅನೇಕ ಮಂದಿ ಪ್ಯಾರಾ ಅಥ್ಲೀಟ್‌ಗಳಿಗೆ ತಮ್ಮ ಜೀವನೋಪಾಯಕ್ಕಾಗಿ ಸಂಪಾದನೆಗೆ ಅವಕಾಶ ಮಾಡಿಕೊಡಲಿದೆ. ‘‘ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮಗೇನಾದರೂ ಆಕಸ್ಮಿಕ ಸಂಭವಿಸಿದಲ್ಲಿ ಅದಕ್ಕೆ ಸರಕಾರ ಬಾಧ್ಯಸ್ಥನಲ್ಲ’’ ಎಂಬ ಪ್ರಮಾಣೀಕರಣ ನೀಡಲು ನಾವು ಸಂತಸಪಡುತ್ತೇವೆ ಎಂದ ಪತ್ರವನ್ನು ಭಾರತೀಯ ಕ್ರೀಡಾಪ್ರಾಕಾರದಿಂದ ಪಡೆಯುವಂತಹ ನೋವಿನ ಸನ್ನಿವೇಶ ಇನ್ನೊಂದಿರಲಾರದು.

 ಪ್ಯಾರಾಅಥ್ಲೀಟ್‌ಗಳಿಗೆ ವಿವಿಧ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹಾಗೂ ಅವರಿಗೆ ಉತ್ಕೃಷ್ಟ ಗುಣಮಟ್ಟದ ಸಲಕರಣೆಗಳನ್ನು ಒದಗಿಸುವ ಮೂಲಕ ಅವರು ಘನತೆಯನ್ನು ಸಂಪಾದಿಸಲು ಶ್ರಮಿಸುತ್ತಿರುವ ಏಕೈಕ ಎನ್‌ಜಿಒ ಸಂಸ್ಥೆ ನಮ್ಮದಾಗಿದೆ. ಈ ಸಂಸ್ಥೆ ಸ್ಥಾಪನೆಯಾದ ಕೇವಲ ಹತ್ತು ತಿಂಗಳುಗಳಲ್ಲಿ ನಾವು ವಿವಿಧ ಕ್ರೀಡಾಕೂಟಗಳಲ್ಲಿ ಒಟ್ಟು 9 ಅಂತಾರಾಷ್ಟ್ರೀಯ ಪದಕಗಳನ್ನು ಗೆಲ್ಲುವಲ್ಲಿ ಸಲರಾಗಿದ್ದೇವೆ. ಆದರೆ ಸರಕಾರದ ಬೆಂಬಲವಿದ್ದಲ್ಲಿ, ಮುಂದಿನ ಪ್ಯಾರಾಲಿಂಪಿಕ್ಸ್ ನಲ್ಲಿ ನಾವು ನೂರಕ್ಕೂ ಅಕ ಪದಕಗಳನ್ನು ಗೆದ್ದು ಕೊಡುವೆವೆಂದು ಭರವಸೆ ನೀಡುತ್ತೇವೆ.

ರೈಲ್ವೆಯಂತಹ ಸರಕಾರಿ ಇಲಾಖೆಗಳಲ್ಲಿ ಅಥ್ಲೀಟ್‌ಗಳಿಗೆ ಹಾಗೂ ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ವಿಶೇಷ ಮೀಸಲಾತಿ ಕೋಟಾಗಳಿವೆ. ಆದರೆ ಪ್ಯಾರಾಅಥ್ಲೀಟ್‌ಗಳಿಗೆ ಯಾಕಿಲ್ಲ?.
 ಸ್ನೇಹಪರ ಹಾಗೂ ಸಂಪರ್ಕಕ್ಕೆ ಲಭ್ಯವಿರುವಂತಹ ಸಮಿತಿಯೊಂದನ್ನು ನಾವು ಕೇಳುತ್ತಿದ್ದೇವೆ. ಭಿನ್ನಸಾಮರ್ಥ್ಯದವರನ್ನು ಗೌರವಯುತವಾಗಿ ದಿವ್ಯಾಂಗರೆಂದು ಪರಿಗಣಿಸುತ್ತಿರುವಾಗ, ದಿವ್ಯ ಭಾರತವನ್ನು ನಿರ್ಮಿಸಲು ಅವರಿಗೆ ಯಾಕೆ ನೆರವಾಗಬಾರದು?.
 

(ಲೇಖಕರ ಪರಿಚಯ: ಆದಿತ್ಯ ಮೆಹ್ತಾ ಅವರು 2014ರ ಪ್ಯಾರಾ ಏಶ್ಯನ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ ಹಾಗೂ ಕೃತಕ ಕಾಲಿನೊಂದಿಗೆ 100 ಕಿ.ಮೀ. ವೇಗದ ನಡಿಗೆಗಾಗಿ 2013ರಲ್ಲಿ ಲಿಮ್ಕಾ ಬುಕ್ ಆ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡಿದ್ದಾರೆ. ಅವರು 2014ರಲ್ಲಿ ಸ್ಥಾಪಿಸಿರುವ ಆದಿತ್ಯ ಮೆಹ್ತಾ ಪ್ರತಿಷ್ಠಾನವು, ಪ್ಯಾರಾ ಅಥ್ಲೀಟ್‌ಗಳು ತಮ್ಮ ಬದುಕನ್ನು ಪುನರ್‌ನಿರ್ಮಿಸಲು ನೆರವಾಗುತ್ತಿದೆ.)

Writer - ಆದಿತ್ಯ ಮೆಹ್ತಾ

contributor

Editor - ಆದಿತ್ಯ ಮೆಹ್ತಾ

contributor

Similar News