AI Vs Smartphone; ಜಾಗತಿಕ ಮೆಮೊರಿ ಕೊರತೆಯಿಂದ ಏರಲಿದೆ ಸ್ಮಾರ್ಟ್ ಫೋನ್ ಬೆಲೆ
Photo Credit : Meta AI
RAM ಬೆಲೆಯೇರಿಕೆಯ ವೆಚ್ಚವನ್ನು ಸ್ಮಾರ್ಟ್ ಫೋನ್ ತಯಾರಕರು ತಮ್ಮ ಎಲ್ಲಾ ವಿಧದ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಏರಿಸುವ ಮೂಲಕ ನಿಭಾಯಿಸುತ್ತಿದ್ದಾರೆ.
AI ಬೂಮ್ ನಿಂದಾಗಿ ಜಾಗತಿಕವಾಗಿ ಮೆಮೊರಿ ಕೊರತೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ RAM ಬೆಲೆಗಳು ಏರಿಕೆಯಾಗುತ್ತಿವೆ. RAM ಬೆಲೆಯೇರಿಕೆಯ ವೆಚ್ಚವನ್ನು ಸ್ಮಾರ್ಟ್ ಫೋನ್ ತಯಾರಕರು ತಮ್ಮ ಎಲ್ಲಾ ವಿಧದ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಏರಿಸುವ ಮೂಲಕ ನಿಭಾಯಿಸುತ್ತಿದ್ದಾರೆ. ನಿಮ್ಮ ಸ್ಮಾರ್ಟ್ ಫೋನ್ ಬದಲಿಸುವ ಉದ್ದೇಶ ನಿಮಗಿದ್ದರೆ ಹೆಚ್ಚು ವೆಚ್ಚ ಮಾಡಲು ಸಿದ್ಧರಾಗಿ!
►ಸ್ಮಾರ್ಟ್ ಫೋನ್ ಬೆಲೆ ಏರಿಸಿರುವ ಕಂಪೆನಿಗಳು
ಸ್ಯಾಮ್ಸಂಗ್ ಮತ್ತು ಒಪ್ಪೊ ಈಗಾಗಲೇ ಬೆಲೆಯನ್ನು ಏರಿಸಿವೆ. ಉದಾಹರಣೆಗೆ ಒಪ್ಪೊನ ಹೊಸ ರೆನೊ 14 (ರಿವ್ಯೂ) ಒಂದು ಮಧ್ಯಮಶ್ರೇಣಿಯ ಸಾಧನವಾಗಿದ್ದು, ಈ ವರ್ಷದ ಆರಂಭದಲ್ಲಿ 8ಜಿಬಿ RAMನಲ್ಲಿ ಬಿಡುಗಡೆ ಮಾಡಿದೆ. ಅದರ ಬೆಲೆ ರೂ 37,999 ಇಡಲಾಗಿತ್ತು. ಇದೀಗ ಅದೇ ಮೊಬೈಲ್ ಅಮೆಜಾನ್ ನಲ್ಲಿ 39,999 ರೂ.ಕ್ಕೆ ಮಾರಾಟವಾಗುತ್ತಿದೆ.
ಸ್ಯಾಮ್ಸಂಗ್ ಇತ್ತೀಚೆಗೆ 8ಜಿಬಿ ವೇರಿಯಂಟ್ನ ಗ್ಯಾಲಕ್ಸಿ ಎ17(ರಿವ್ಯೂ) ಅನ್ನು 18,999 ರೂ.ಕ್ಕೆ ಬಿಡುಗಡೆ ಮಾಡಿತ್ತು. ಇದೀಗ ಸ್ಯಾಮ್ಸಂಗ್ ವೆಬ್ಸೈಟ್ನಲ್ಲಿ 6ಜಿಬಿ RAMನ ಗ್ಯಾಲಕ್ಸಿ ಎ17 ರೂ 19,499ಕ್ಕೆ ಮಾರಾಟವಾಗುತ್ತಿದೆ.
ಆ್ಯಪಲ್ ಕೂಡ ತನ್ನ ಐಫೋನ್ 17 ಸೀರೀಸ್ ಬೆಲೆಯನ್ನು ಏರಿಸುವ ಸಾಧ್ಯತೆಯಿದೆ ಎನ್ನುವ ಊಹೆಗಳು ಹರಡಿವೆ. ಆದರೆ ಹಾಗಾಗುವ ಸಾಧ್ಯತೆ ಕಡಿಮೆ ಇದೆ. ಜಾಗತಿಕವಾಗಿ ಮೆಮೊರಿ ಸಮಸ್ಯೆ ಉಂಟಾಗುವ ಮೊದಲೇ ಟೆಕ್ ದೈತ್ಯ ಆ್ಯಪಲ್ ಉತ್ಪಾದನೆಯನ್ನು ಆರಂಭಿಸಿತ್ತು.
►ಜಾಗತಿಕ ಮಾರುಕಟ್ಟೆಯಲ್ಲಿ ಏನಾಗುತ್ತಿದೆ?
ಗೂಗಲ್ನಿಂದ ಆರಂಭಿಸಿ ಓಪನ್AI, ಮೈಕ್ರೋಸಾಫ್ಟ್ ಮೊದಲಾಗಿ ಪ್ರಮುಖ ಟೆಕ್ ದೈತ್ಯ ಕಂಪೆನಿಗಳು AI ಚಾಟ್ಬಾಟ್ಗಳಿಗೆ ಕಂಪ್ಯೂಟಿಂಗ್ ಪವರ್ ಅನ್ನು ಲೀಸ್ಗೆ ತೆಗೆದುಕೊಳ್ಳಲು ಲಕ್ಷಾಂತರ ಡಾಲರ್ಗಳನ್ನು ಸುರಿಯುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಸ್ಯಾಮ್ಸಂಗ್ ಮತ್ತು ಎಸ್ಕೆ ಹೈನಿಕ್ಸ್ನ ನಂತರ RAM ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಹೆಸರಾಗಿದ್ದ ಮೈಕ್ರಾನ್ ತನ್ನ ಗ್ರಾಹಕ ಕೇಂದ್ರಿತ ಬ್ರಾಂಡ್ ಅನ್ನು ಮುಚ್ಚುವುದಾಗಿ ಘೋಷಿಸಿತ್ತು. ಅದು RAM ಮತ್ತು ಸಂಗ್ರಹವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿರುವ AI ಕಂಪೆನಿಗಳ ಮೇಲೆ ಗಮನ ಕೊಡುವ ಉದ್ದೇಶ ಹೊಂದಿರುವ ಕಾರಣದಿಂದ ಗ್ರಾಹಕ ಕೇಂದ್ರಿತ ಬ್ರಾಂಡ್ ಅನ್ನು ರದ್ದು ಮಾಡಲು ನಿರ್ಧರಿಸಿರುವುದಾಗಿ ಹೇಳಿದೆ.
ಗ್ರಾಹಕ ಗ್ರೇಡ್ನ ಮೆಮೊರಿ ಮತ್ತು ಸಂಗ್ರಹಕ್ಕೆ ಹೋಲಿಸಿದರೆ ಉದ್ಯಮ-ಗ್ರೇಡ್ನ ಮೆಮೊರಿಯಲ್ಲಿ (HBM) ಲಾಭದ ಮಾರ್ಜಿನ್ ಅತ್ಯಧಿಕವಾಗಿರುತ್ತದೆ. ಕಳೆದ ಕೆಲವು ತಿಂಗಳಲ್ಲಿ RAM ಬೆಲೆಗಳು ದುಪ್ಪಟ್ಟು ಆಗಿವೆ ಮತ್ತು ಮುಂದಿನ ಕೆಲ ವರ್ಷಗಳವರೆಗೆ ಜಾಗತಿಕವಾಗಿ ಮೆಮೊರಿ ಕೊರತೆ ಕಾಣಿಸಿಕೊಳ್ಳಲಿದೆ. ಪ್ರಸ್ತುತ RAM ಮಾರುಕಟ್ಟೆ ಬಿಗಿಯಾಗಿದೆ. ಏಕೆಂದರೆ ಈ ಡಾಟಾ ಕೇಂದ್ರಗಳಿಗೆ ಅಗತ್ಯವಿರುವ ಮೆಮೊರಿ ಸೃಷ್ಟಿಸುವಲ್ಲಿ ಮೆಮೊರಿ ತಯಾರಕರಾದ ಸ್ಯಾಮ್ಸಂಗ್ ಮತ್ತು ಎಸ್ಕೆ ಹೈನಿಕ್ಸ್ನಂತಹ ಕಂಪೆನಿಗಳಿಗೆ ಸಾಧ್ಯವಾಗುತ್ತಿಲ್ಲ.
►ಈಗಲೇ ಸ್ಮಾರ್ಟ್ ಫೋನ್ ಖರೀದಿಸುವುದು ಉತ್ತಮವೆ?
ಈ ಕ್ಷಣದಲ್ಲಿ ಯಾವುದೂ ಖಚಿತವಾಗಿಲ್ಲ. ಮುಂದಿನ ತಿಂಗಳುಗಳಲ್ಲಿ RAM ಮತ್ತು ಸಂಗ್ರಹ ಬೆಲೆಗಳು ಹಿಂದೆಂದೂ ನೋಡದ ರೀತಿಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಮೆಮೊರಿ ಮಾರುಕಟ್ಟೆಯಲ್ಲಿ ಚಂಚಲತೆ ಇರುವ ಕಾರಣದಿಂದ ಪ್ರಸ್ತುತ ಮೊಬೈಲ್ ಬದಲಿಸಬೇಕೆಂದುಕೊಂಡವರು ಹೊಸ ಸ್ಮಾರ್ಟ್ ಫೋನ್ ಖರೀದಿಸಿಬಿಡುವುದು ಒಳಿತು. ಮುಂದಿನ ವರ್ಷದಿಂದ ಮಧ್ಯಮ ಶ್ರೇಣಿ ಮತ್ತು ಬಜೆಟ್ ಸ್ಮಾರ್ಟ್ ಫೋನ್ ಗಳು 8ಜಿಬಿ RAM ರೇಂಜ್ನಲ್ಲಿ ಮಾತ್ರವೇ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.