×
Ad

ಪ್ರಾಚೀನ ರೋಮನ್ ಚಿನ್ನದ ನಾಣ್ಯ ಪತ್ತೆ

Update: 2016-09-14 23:51 IST

ಜೆರುಸಲೇಂ, ಸೆ. 14: ರೋಮನ್ ಚಕ್ರವರ್ತಿ ನೀರೊವಿನ ಚಿತ್ರವನ್ನು ಹೊಂದಿರುವ ಅತ್ಯಂತ ಅಪರೂಪದ ಚಿನ್ನದ ನಾಣ್ಯವೊಂದನ್ನು ಪುರಾತನ ವಸ್ತು ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ನಾಣ್ಯವು ಕ್ರಿಸ್ತಶಕ 70ರಲ್ಲಿ ಜೆರುಸಲೇಂ ವಿನಾಶ ಹೊಂದುವ ಒಂದು ದಶಕದ ಹಿಂದಿನದ್ದು ಎಂದು ಅಂದಾಜಿಸಲಾಗಿದೆ.

ಜೆರುಸಲೇಂನ ವೌಂಟ್ ಝಯನ್‌ನ ಉತ್ಖನನ ಪ್ರದೇಶದಲ್ಲಿರುವ ನಾರ್ತ್ ಕ್ಯಾರಲೈನ ವಿಶ್ವವಿದ್ಯಾನಿಲಯದಲ್ಲಿ ನಾಣ್ಯ ಪತ್ತೆಯಾಗಿದೆ.

ಸೀಸರ್‌ನ ವೇಷದಲ್ಲಿರುವ ಯುವಕ ನೀರೊನ ಚಿತ್ರ ಚಿನ್ನದ ನಾಣ್ಯದಲ್ಲಿದೆ. ನಾಣ್ಯದ ಅಂಚಿನ ಸುತ್ತವಿರುವ ಅಕ್ಷರಗಳು ಹೀಗಿವೆ: ‘‘ಎನ್‌ಇಆರ್‌ಒ ಸಿಎಇಎಸ್‌ಎಆರ್ ಎವಿಜಿ ಐಎಂಪಿ’’.ಈ ನಾಣ್ಯವನ್ನು ಕ್ರಿಸ್ತ ಶಕ 56/57ರಲ್ಲಿ ಮುದ್ರಿಸಿರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News