ವಿಶ್ವಸಂಸ್ಥೆ ಎದುರು ಬಲೂಚ್ ಕಾರ್ಯಕರ್ತರಿಂದ ಪಾಕ್ ವಿರುದ್ಧ ಪ್ರತಿಭಟನೆ
Update: 2016-09-14 23:52 IST
ನ್ಯೂಯಾರ್ಕ್, ಸೆ. 14: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಬಲೂಚ್ ಕಾರ್ಯಕರ್ತರ ಗುಂಪೊಂದು ಮಂಗಳವಾರ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿತು.
ಬಲೂಚಿಸ್ತಾನಕ್ಕೆ ಸ್ವಾತಂತ್ರ ಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಮಾನವತೆಯ ವಿರುದ್ಧ ಅಪರಾಧ ಎಸಗುತ್ತಿದೆ ಎಂದು ಆರೋಪಿಸಿದರು.
ಫ್ರೀ ಬಲೂಚಿಸ್ತಾನ ಮೂವ್‌ಮೆಂಟ್ (ಎಫ್‌ಬಿಎಂ) ಎಂಬ ಸಂಘಟನೆ ಪ್ರತಿಭಟನೆಯನ್ನು ಆಯೋಜಿಸಿತ್ತು. ವಿಶ್ವಸಂಸ್ಥೆಯ 71ನೆ ಮಹಾಧಿವೇಶನದದ ಆರಂಭದಲ್ಲಿ ಪ್ರತಿಭಟನೆ ನಡೆದಿರುವುದು ಗಮನಾರ್ಹವಾಗಿದೆ.