×
Ad

ಕೇಂದ್ರ ಸಂಪುಟದಿಂದ ಬಜೆಟ್ ಪ್ರಕ್ರಿಯೆ ಪರಿಷ್ಕರಣೆ

Update: 2016-09-15 23:53 IST

ಹೊಸದಿಲ್ಲಿ, ಸೆ.15: ರೈಲ್ವೆ ಬಜೆಟ್ ಹಾಗೂ ಸಾಮಾನ್ಯ ಬಜೆಟ್‌ನ ವಿಲೀನ ಪ್ರಸ್ತಾವವನ್ನು ಕೇಂದ್ರ ಸಂಪು ಟವು ಮುಂದಿನವಾರ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಹೊಸ ಆರ್ಥಿಕ ವರ್ಷ ಆರಂಭದ ಎಪ್ರಿಲ್‌ಗೆ ಮೊದಲು ಎಲ್ಲ ಶಾಸನಾತ್ಮಕ ಕೆಲಸಗಳನ್ನು ಪೂರ್ಣ ಗೊಳಿಸಲು ಅನುಕೂಲವಾಗುವಂತೆ ಸಂಸತ್ತಿನ ಅಧಿವೇಶವನ್ನು ಸುಮಾರು ಒಂದು ತಿಂಗಳು ಮುಂಚಿತವಾಗಿ ಅಂದರೆ ಜನವರಿ 24ರಂದೇ ಆರಂಭಿ ಸುವ ಸಾಧ್ಯತೆಯಿದೆ.

 ಮುಂದಿನ ವರ್ಷಗಳಲ್ಲಿ ಬಜೆಟ್ ಅಧಿವೇಶನವನ್ನು ಬೇಗನೆ ನಡೆಸುವುದು ಪದ್ಧತಿಯಾಗುವ ಸಂಭವವಿದೆ. ಈ ಹಿಂದೆ ಅನುಮೋದನೆಗೊಂಡಿರುವ ಜಿಎಸ್‌ಟಿ ಮಸೂದೆಯ ಜಾರಿಗಾಗಿ ಬೆಂಬಲಿಗ ಕಾಯ್ದೆಗಳಿಗೆ ಅನುಮೋದನೆ ಪಡೆಯಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಸೆ.12ಕ್ಕೆ ಆರಂಭಿಸುವ ನಿರೀಕ್ಷೆಯಿದೆ. ಹಣಕಾಸು ಸಚಿವಾಲಯವು ಬಜೆಟ್ ರಚನೆ ಪ್ರಕ್ರಿಯೆಯ ಪರಿಷ್ಕರಣೆಯಲ್ಲಿ ನಿರತವಾಗಿದೆ. ರೈಲ್ವೆಗೆ ಪ್ರತ್ಯೇಕ ಬಜೆಟ್‌ನ ಹಾಲಿ ಪದ್ಧತಿ ರದ್ದು ಹಾಗೂ ಬಹು ವಾರ್ಷಿಕ ಫಲಿತಾಂಶಾಧಾರಿತ ಬಜೆಟಿಂಗ್‌ಗೆ ಪರಿವರ್ತನೆಯನ್ನು ಅದರಿಂದ ಕಾಣಬಹುದಾಗಿದೆ.
 ಇಲ್ಲಿಯವರೆಗೆ, ಬಜೆಟ್ ಅಧಿವೇಶನ ವನ್ನು ಫೆಬ್ರವರಿಯ 3ನೆ ಅಥವಾ 4ನೆ ವಾರ ಆರಂಭಿಸಲಾಗುತ್ತಿತ್ತು ಹಾಗೂ ಕೇಂದ್ರ ಬಜೆಟನ್ನು ತಿಂಗಳ ಕೊನೆಯ ದಿನ ಮಂಡಿಸಲಾಗುತ್ತಿತ್ತು. ಇದರಿಂದಾಗಿ ಕಾಯ್ದೆಗಳ ಮಂಜೂರಾತಿಗಳು ಫೆಬ್ರವರಿ ಹಾಗೂ ಮೇಗಳ ನಡುವೆ 2 ಹಂತಗಳಲ್ಲಿ ನಡೆಯುತ್ತಿದ್ದವು.
 ಎಲ್ಲ ತೆರಿಗೆ ಪ್ರಸ್ತಾವಗಳು ಹಾಗೂ ಯೋಜನೆಗಳ ಖರ್ಚು ವೆಚ್ಚ ಹೊಸ ಆರ್ಥಿಕ ವರ್ಷಾರಂಭ ದಿನವಾದ ಎ.1ರಂದೇ ಜಾರಿಗೆ ಬರುವಂತೆ ಮಾಡಲು ಸಂಸತ್ತಿನ ಬಜೆಟ್ ಅಧಿ ವೇಶನವನ್ನು ಜ.24ರಂದೇ ಆರಂಭಿಸುವ ನಿರೀಕ್ಷೆಯಿದೆಯೆಂದು ಮೂಲಗಳು ತಿಳಿಸಿವೆ.
ಆರ್ಥಿಕ ಸಮೀಕ್ಷೆಯನ್ನು ಜ.30ರಂದು ಹಾಗೂ ಕೇಂದ್ರ ಬಜೆಟನ್ನು ಜ.31ರಂದು ಮಂಡಿಸುವ ಸಾಧ್ಯತೆಯಿದೆ. ಇದ ರಿಂದಾಗಿ ಲೇಖಾನು ದಾನ ಹಾಗೂ ಆರ್ಥಿಕ ಬಿಲ್‌ಗಳ ಮಂಜೂರಾತಿಯನ್ನು ಮುಂದಿನ 2 ತಿಂಗಳುಗಳೊಳಗೆ ಪಡೆ ಯಲು ಸಾಧ್ಯವಾಗಲಿದೆಯೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News