×
Ad

ಪಕ್ಷಕ್ಕೆ ರಾಜೀನಾಮೆ ನೀಡಿದ ಪಿಡಿಪಿ ಸಂಸದ ತಾರಿಕ್ ಕರ್ರಾ

Update: 2016-09-15 23:54 IST

ಶ್ರೀನಗರ, ಸೆ.15: ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ಸಂಕಷ್ಟದಲ್ಲಿರುವ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಇನ್ನೊಂದು ಹಿನ್ನಡೆಯಾಗಿದೆ. ಹಿರಿಯ ಪಿಡಿಪಿ ನಾಯಕ ತಾರಿಕ್ ಹಮೀದ್ ಕರ್ರಾ ಅವರು ಪಿಡಿಪಿಯು ಆರೆಸ್ಸೆಸ್‌ನೊಂದಿಗೆ ಸಹಭಾಗಿಯಾಗಿದೆ ಎಂದು ಆರೋಪಿಸಿ ಪಕ್ಷಕ್ಕೆ ಮತ್ತು ತನ್ನ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಡಿಪಿಯು ಫ್ಯಾಶಿಸ್ಟ್ ಆರೆಸ್ಸೆಸ್ ಹಿಡಿತದಲ್ಲಿರುವ ಬಿಜೆಪಿಯ ಸಹಭಾಗಿಯಾಗಿದೆ ಎಂದು ದೂರಿದರು.
2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿರುವ ಕರ್ರಾ ಮಾಜಿ ಮುಖ್ಯಮಂತ್ರಿ ದಿ.ಮುಫ್ತಿ ಮುಹಮ್ಮದ್ ಸಯೀದ್ ಅವರ ನಿಕಟವರ್ತಿಯಾಗಿದ್ದರಲ್ಲದೆ, ಪಿಡಿಪಿಯ ಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದಾರೆ.
ಪಿಡಿಪಿ-ಬಿಜೆಪಿ ಮೈತ್ರಿಯ ಪರಿಕಲ್ಪನೆಯನ್ನು ಎಂದಿನಿಂದಲೂ ವಿರೋಧಿಸುತ್ತಿರುವ ಕರ್ರಾ ಈ ಬಗ್ಗೆ ತನ್ನ ಅಸಮಾಧಾನವನ್ನು ಈ ಮೊದಲೂ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News