×
Ad

ಹೀರಾನಂದಾನಿ ಟವರ್ಸ್‌ನಲ್ಲಿ ಬೆಂಕಿ

Update: 2016-09-16 00:00 IST

ಮುಂಬೈ, ಸೆ.15: ಇಲ್ಲಿನ ಕಾಂದಿವಲಿ ಪಶ್ಚಿಮದ ಹೀರಾನಂದಾನಿ ಟವರ್ಸ್‌ನಲ್ಲಿ ಗುರುವಾರ ಅಪರಾಹ್ನ ಬೆಂಕಿ ಅನಾಹುತವೊಂದು ಸಂಭವಿಸಿದೆ.

ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಧಾವಿಸಿವೆ. ಬೆಂಕಿ ಉಂಟಾಗಲು ಕಾರಣ ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ. ಮಧ್ಯಾಹ್ನ 1 ಗಂಟೆಯ ಬಳಿಕ ಕಟ್ಟಡದ 32ನೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಘಟನೆಯಲ್ಲಿ ಯಾರೂ ಕಟ್ಟಡದೊಳಗೆ ಸಿಲುಕಿಕೊಂಡಿಲ್ಲ. ಎಲ್ಲರನ್ನೂ ತೆರವುಗೊಳಿಸಲಾಗಿದೆ. ಬೆಂಕಿ ಆರಿಸುವ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆಯೆಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಬೆಂಕಿ ಅನಾಹುತದಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News