×
Ad

ಪ್ರೇಮನಿವೇದನೆಯನ್ನು ನಿರಾಕರಿಸಿದ ಹುಡುಗಿಯನ್ನು ಕೊಂದು ಹಾಕಿದ ಯುವಕ

Update: 2016-09-16 12:05 IST

ಕೋಯಮ್ಮತ್ತೂರು, ಸೆಪ್ಟಂಬರ್16: ಪ್ರೇಮಿಸಲು ನಿರಾಕರಿಸಿದ ಯುವತಿಯೊಬ್ಬಳನ್ನು ಭಗ್ನಪ್ರೇಮಿಯೊಬ್ಬ ಚಾಕುವಿನಿಂದ ಇರಿದು ಸಾಯಿಸಿದ ಹೃದಯವಿದ್ರಾವಕ ಘಟನೆಕೋಯಮತ್ತೂರಿನ ಅಣ್ಣೂರಿನ ತೆನ್ನಂಪಾಳಯಂ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿನ ನಿವಾಸಿಗಳಾದ ಸೋಮಸುಂದರಂ-ಶಾರದ ದಂಪತಿಯ ಏಕೈಕ ಪುತ್ರಿಯಾಗಿದ್ದ ಧನ್ಯಾ ಹಂತಕನ ತಿವಿತದಿಂದಾಗಿ ಮೃತಳಾದ ನತದೃಷ್ಟ ಯುವತಿಯೆಂದು ಗುರುತಿಸಲಾಗಿದೆ.

ಪೊಲೀಸರು ಕೊಲೆ ಆರೋಪಿ ಪಾಲಕ್ಕಾಡ್ ಪುತ್ತೂರ್ ಎಂಬಲ್ಲಿನ ನಿವಾಸಿ ಝಹೀರ್(27)ನನ್ನು ಬಂಧಿಸಿದ್ದು, ಧನ್ಯಾಳ ಹತ್ಯೆಗೈದ ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಝಹೀರ್‌ನನ್ನು ಪಾಲಕ್ಕಾಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂದುವರದಿ ತಿಳಿಸಿದೆ.

ಹತ್ಯೆಆದ ಧನ್ಯಾ ಬಿಎಸ್ಸಿ(ಐಟಿ)ಪಧವೀಧರೆಯಾಗಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಸೂಪರ್‌ವೈಸರ್ ಆಗಿ ಉದ್ಯೋಗ ಮಾಡುತ್ತಿದ್ದಳು. ಝಹೀರ್ ಹಲವು ಬಾರಿ ಪ್ರೇಮ ನಿವೇದನೆ ಮಾಡಿದ್ದರೂ ಆಕೆ ನಿರಾಕರಿಸಿದ್ದಳು. ಈ ನಡುವೆ ಊರವರು ಝಹೀರ್‌ಗೆ ಎಚ್ಚರಿಕೆಯನ್ನು ನೀಡಿದ್ದರು. ನಂತರ ಆತ ತನ್ನ ನಿವಾಸವನ್ನು ಬೇರೆಡೆಗೆ ವರ್ಗಾಯಿಸಿದ್ದ. ಆದರೂ ಆಗಾಗ ಅಣ್ಣೂರಿಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಧನ್ಯಾಳ ತಂದೆ ತಾಯಿ ಆಸ್ಪತ್ರೆಗೆ ಹೋಗಿದ್ದ ಸಮಯನೋಡಿ ಮನೆಯ ಕಂಪೌಡ್ ಹಾರಿ ಮನೆಯೊಳಗೆ ನುಗ್ಗಿ ಧನ್ಯಾಳನ್ನು ಯದ್ವತದ್ವಾತಿವಿದು ಝಹೀರ್ ಹತ್ಯೆಗೈದಿದ್ದಾನೆ. ಪಾಲಕ್ಕಾಡಿನವರಾದ ಧನ್ಯಾಳ ತಂದೆ ಸೋಮಸುಂದರಂ ತಮಿಳ್ನಾಡಿನ ಕೋಯಮುತ್ತೂರಿನಲ್ಲಿ ವಾಸಿಸುತ್ತಿದ್ದರು. ಧನ್ಯಾಳನ್ನು ಪಾಲಕ್ಕಾಡ್‌ನ ಶಿಕ್ಷಕರೊಬ್ಬರಿಗೆ ವಿವಾಹ ಮಾಡಿಕೊಡುವುದಾಗಿ ನಿಶ್ಚಿತಾರ್ಥವಾಗಿತ್ತು. ತಾನು ಪ್ರೀತಿಸಿದ ಹುಡುಗಿ ಇನ್ನೊಬ್ಬರ ಪಾಲಾಗುವುದನ್ನು ಸಹಿಸಲಾಗದೆ ಕೊಲೆಗೈದೆ ಎಂದು ಝಹೀರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News