ಏಷ್ಯದ ಶ್ರೇಷ್ಠ 25ರ ಪಟ್ಟಿಯಲ್ಲಿ ಭಾರತದ ಐದು ಮ್ಯೂಸಿಯಮ್‌ಗಳು

Update: 2016-09-16 14:33 GMT

ಹೊಸದಿಲ್ಲಿ,ಸೆ.16: ಸಮೀಕ್ಷೆಯೊಂದು ಸಿದ್ಧಗೊಳಿಸಿರುವ ಏಷ್ಯದ ಶ್ರೇಷ್ಠ 25 ವಸ್ತು ಸಂಗ್ರಹಾಗಾರಗಳ ಪಟ್ಟಿಯಲ್ಲಿ ಭಾರತದ ಐದು ವಸ್ತು ಸಂಗ್ರಹಾಗಾರಗಳು ಸ್ಥಾನ ಪಡೆದುಕೊಂಡಿವೆ.

ಲೇಹ್‌ನ ‘ಹಾಲ್ ಆಫ್ ಫೇಮ್’ ಏಷ್ಯದ ಪಟ್ಟಿಯಲ್ಲಿ ಭಾರತದ ಮ್ಯೂಸಿಯಮ್‌ಗಳ ಪೈಕಿ ಅತ್ಯುನ್ನತ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಬಾಗೋರ ಕಿ ಹವೇಲಿ (ಉದಯಪುರ),ವಿಕ್ಟೋರಿಯಾ ಮೆಮೋರಿಯಲ್ ಹಾಲ್(ಕೋಲ್ಕತಾ),ಸಾಲಾರ್ ಜಂಗ್ ಮ್ಯೂಸಿಯಂ(ಹೈದರಾಬಾದ್) ಮತ್ತು ಜೈಸಲ್ಮೇರ್ ವಾರ್ ಮ್ಯೂಸಿಯಂ (ಜೈಸಲ್ಮೇರ್) ಇವೆ.

 ದರ್ಶನ ಮ್ಯೂಸಿಯಂ(ಪುಣೆ),ಡಾನ್ ಬಾಸ್ಕೋ ಸೆಂಟರ್ ಫಾರ್ ಇಂಡಿಜಿನಿಯಸ್ ಕಲ್ಚರ್ಸ್(ಶಿಲ್ಲಾಂಗ್),ಹೆರಿಟೇಜ್ ಟ್ರಾನ್ಸ್‌ಪೋರ್ಟ್ ಮ್ಯೂಸಿಯಂ(ಕೊಲ್ಲಾಪುರ) ಮತ್ತು ಗಾಂಧಿ ಸ್ಮತಿ(ದಿಲ್ಲಿ) ಇವೂ ಭಾರತದ ಅತ್ಯುನ್ನತ ಹತ್ತು ವಸ್ತು ಸಂಗ್ರಹಾಲಯಗಳ ಪಟ್ಟಿಯಲ್ಲಿವೆ.

ಆದರೆ ವಿಶ್ವದ 25 ಶ್ರೇಷ್ಠ ವಸ್ತು ಸಂಗ್ರಹಾಗಾರಗಳ ಪಟ್ಟಿಯಲ್ಲಿ ಭಾರತವು ಯಾವುದೇ ಸ್ಥಾನ ಪಡೆದಿಲ್ಲ. ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮೊದಲ ಸ್ಥಾನದಲ್ಲಿದೆ.

ಏಷ್ಯದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಚೀನಾದ ದಿ ಮ್ಯೂಸಿಯಂ ಆಫ್ ಕಿನ್ ಟೆರ್ರಾಕೊಟ್ಟಾ ವಾರಿಯರ್ಸ್ ಆ್ಯಂಡ್ ಹಾರ್ಸ್ ದಕ್ಕಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News